ಪೆರ್ಲ: ಮಲೆತ್ತಡ್ಕ-ಸ್ವರ್ಗ ಶ್ರೀ ಜಟಾಧಾರಿ ಮೂಲಸ್ಥಾನದಲ್ಲಿ ಇಂದು ಕನ್ಯಾಮಾಸದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ 6.30ಕ್ಕೆ ಶ್ರೀ ದುರ್ಗಾ ಪೂಜೆ, ಮಂಗಳಾರತಿ, 6.45ಕ್ಕೆ ಗ್ರಾಮಸ್ಥರ ಪರವಾಗಿ ಶ್ರೀ ಜಟಾಧಾರಿ ದೈವಕ್ಕೆ ತಂಬಿಲ ಸೇವೆ ಬಳಿಕ ಶ್ರೀ ದೈವಕ್ಕೆ ಒಂದರ ನಂತರ ಒಂದರಂತೆ ಎರಡು ಹರಕೆ (ಸೇವಾ) ತಂಬಿಲಗಳು ನಡೆಯಲಿವೆ. ರಾತ್ರಿ 8.30ಕ್ಕೆ ತೀರ್ಥ ಪ್ರಸಾದ ವಿತರಣೆ, ಅನ್ನ ಪ್ರಸಾದ ನಡೆಯಲಿದೆ.

