ಕಾಸರಗೋಡು: ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ವತಿಯಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಬಾರ್ಬರ್ ಶಾಪ್ ನವೀಕರಣ ಧನಸಹಾಯ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 20ರವರೆಗೆ ವಿಸ್ತರಿಸಲಾಗಿದೆ.
ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷವನ್ನು ಮೀರದ ಹಾಗೂ ಆಗಸ್ಟ್ 1, 2026ರಂದು 60 ವರ್ಷ ವಯಸ್ಸು ಪೂರ್ಣಗೊಂಡಿರದ ಒ.ಬಿ.ಸಿ ವರ್ಗಕ್ಕೆ ಸೇರಿದ ಬಾರ್ಬರ್ ಶಾಪ್ ಅಥವಾ ಯುನಿಸೆಕ್ಸ್ ಸಲೂನ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಈ ಯೋಜನೆಯನ್ವಯ ಹಿಂದಿನ ವರ್ಷಗಳಲ್ಲಿ ಧನಸಹಾಯ ಪಡೆದಿರುವವರು ಹಾಗೂ ಅವರ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಅರ್ಹ ಅಭ್ಯರ್ಥಿಗಳು <www.bwin.kerala.gov.in> ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

