ಕುಂಬಳೆ: ಧರ್ಮತ್ತಡ್ಕ ನಿವಾಸಿ, ಹಿರಿಯ ಆರೆಸ್ಸೆಸ್ ಕಾರ್ಯಕರ್ತ ಕರ್ವಜೆ ನಿವಾಸಿ ವೆಂಕಟ್ರಮಣ ಭಟ್ (73)ಬುಧವಾರ ನಿಧನ ಹೊಂದಿದರು. ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಹೋಟೆಲ್ ವೆಂಕಟ್ರಮಣ ಭಟ್ರು ಎಂದೇ ಗುರುತಿಸಲ್ಪಟ್ಟಿದ್ದ ಇವರು ಪಾಕ ತಜ್ಞರಾಗಿದ್ದರು. ಈ ಹಿಂದೆ ಧರ್ಮತ್ಥಡದಲ್ಲಿ ಹೋಟೆಲ್ ನಡೆಸುತ್ತಿದ್ದ ಇವರು ರುಚಿಕರ ಹೋಳಿಗೆ ತಯಾರಿಯಲ್ಲಿ ಸಿದ್ಧಹಸ್ತರಾಗಿದ್ದರು. ಇವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.


