HEALTH TIPS

ಅಹಮದಾಬಾದ್‌: ದೇಶದ ಮೊದಲ ಎಲ್‌ಎನ್‌ಜಿ ಚಾಲಿತ ರೈಲಿಗೆ ಅಮಿತ್ ಶಾ ಚಾಲನೆ

ಅಹಮದಾಬಾದ್‌ (PTI): ದೇಶದ ಮೊದಲ 'ದ್ರವೀಕೃತ ನೈಸರ್ಗಿಕ ಅನಿಲ'ದಿಂದ (ಎಲ್‌ಎನ್‌ಜಿ) ಚಲಿಸುವ ರೈಲಿಗೆ ಗುಜರಾತ್‌ನ ಸಾಬರಮತಿ ನಿಲ್ದಾಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಹಸಿರು ನಿಶಾನೆ ತೋರಿಸಿದರು. 


ಇದು ಡೀಸೆಲ್‌ ಮತ್ತು ಎಲ್‌ಎನ್‌ಜಿ ಎರಡರಲ್ಲೂ ಚಲಿಸುವ ಡ್ಯುಯಲ್‌-ಫ್ಯುಯೆಲ್‌ ತಂತ್ರಜ್ಞಾನವನ್ನು ಹೊಂದಿದೆ. 

₹1,500 ಕೋಟಿ ಮೊತ್ತದ ಪ್ರಮುಖ ರೈಲ್ವೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. 'ಡಬ್ಲ್ಯುಎಜಿ-12' ಎಲೆಕ್ಟ್ರಿಕ್‌ ಲೋಕೋಮೋಟಿವ್‌ ರೈಲಿಗೂ ಹಸಿರು ನಿಶಾನೆ ತೋರಿಸಿದರು.

ಬಳಿಕ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸರಕು ಸಾಗಣೆಗಾಗಿ ಮೀಸಲಾದ ರೈಲು ಮಾರ್ಗ, ಕ್ಷಿಪ್ರ ರೈಲು ವ್ಯವಸ್ಥೆ, ಅತ್ಯಾಧುನಿಕ ರೈಲು ನಿಲ್ದಾಣಗಳ ನಿರ್ಮಾಣಕ್ಕೆ ನರೇಂದ್ರ ಮೋದಿ ಅವರೇ ಕಾರಣ. ಜಲಜನಕದಿಂದ ಚಲಿಸುವ ರೈಲನ್ನು ಉದ್ಘಾಟಿಸುವ ಮೂಲಕ, ಅವರು ಭಾರತವನ್ನು ವಿಶ್ವದ ಕೇವಲ ನಾಲ್ಕು ದೇಶಗಳ ಸಾಲಿನಲ್ಲಿ ನಿಲ್ಲಿಸಿದ್ದಾರೆ' ಎಂದು ಹೇಳಿದರು.

'2015-16ರಲ್ಲಿ ರೈಲ್ವೆ ಇಲಾಖೆಯು 293 ಕೋಟಿ ಲೀಟರ್‌ ಡೀಸೆಲ್‌ ಬಳಸುತ್ತಿತ್ತು. 2024-25ರ ವೇಳೆಗೆ ಅದು 108 ಕೋಟಿ ಲೀಟರ್‌ಗೆ ಇಳಿದಿತ್ತು. 2030ರ ವೇಳೆಗೆ ಅದನ್ನು ಶೂನ್ಯಕ್ಕೆ ಇಳಿಸಲಾಗುವುದು. ಇದರಿಂದ ವಿದೇಶಿ ವಿನಿಮಯ ಹಣ ಉಳಿತಾಯವಾಗಲಿದೆ' ಎಂದು ತಿಳಿಸಿದರು.

 'ಡಬ್ಲ್ಯುಎಜಿ-12' ಲೋಕೋಮೋಟಿವ್‌ ನಿರ್ವಹಣಾ ಶೆಡ್‌ -ಪಿಟಿಐ ಚಿತ್ರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries