HEALTH TIPS

ಮಸೀದಿ ತೆರವು ಕಾರ್ಯಾಚರಣೆ ಬಳಿಕ ಉಜ್ಜಯಿನಿಯಲ್ಲಿ ಉದ್ವಿಗ್ನ ಪರಿಸ್ಥಿತಿ : 10 ಮಂದಿ ವಿರುದ್ಧ FIR; 2,500 ಪೊಲೀಸರ ನಿಯೋಜನೆ

ಉಜ್ಜಯಿನಿ: ರಸ್ತೆ ವಿಸ್ತರಣಾ ಯೋಜನೆಗಾಗಿ 'ಶಾಹಿ ಮಸೀದಿ'ಯ ಒಂದು ಭಾಗವನ್ನು ತೆರವುಗೊಳಿಸುವ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ಉಂಟಾದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸೋಮವಾರ ಬೆಳಿಗ್ಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. 


ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು.

ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ, ಕಾನೂನು-ಸುವ್ಯವಸ್ಥೆ ಕಾಪಾಡಲು ನೆರೆಯ ಜಿಲ್ಲೆಗಳ ಪೊಲೀಸ್ ತಂಡಗಳನ್ನೂ ಒಳಗೊಂಡಂತೆ ಸುಮಾರು 2,500 ಪೊಲೀಸರನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ.

ಜಿಲ್ಲಾಡಳಿತದ ಪ್ರಕಾರ, 'ಸಿಂಹಸ್ಥ' (ಕುಂಭಮೇಳ) ಹಿನ್ನೆಲೆಯಲ್ಲಿ ವಿಸ್ತರಿಸಲಾಗುತ್ತಿರುವ ರಸ್ತೆಯ ಮಾರ್ಗದಲ್ಲಿ ಮಸೀದಿಯ ಸುಮಾರು 9 ಅಡಿ ಉದ್ದ ಮತ್ತು 4 ಅಡಿ ಅಗಲದ ಭಾಗ ಅಡ್ಡವಾಗಿ ಬರುತ್ತಿದೆ.

ಶಾಹಿ ಮಸೀದಿಯು 100 ವರ್ಷಗಳಿಗೂ ಹಳೆಯದು ಎಂದು ಮಸೀದಿ ಆಡಳಿತ ಮಂಡಳಿ ಹೇಳಿಕೊಂಡಿದೆ.

ಕಲ್ಲು ತೂರಾಟ ಮತ್ತು ಶಾಂತಿ ಭಂಗ ಉಂಟುಮಾಡಿದ ಆರೋಪದ ಮೇಲೆ 10 ಮಂದಿಯನ್ನು ಗುರುತಿಸಲಾಗಿದ್ದು, ಅವರ ವಿರುದ್ಧ FIR ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಸೋಮವಾರ ಬೆಳಿಗ್ಗೆ ನಡೆದ ಗಲಭೆಯ ಬಳಿಕ FIR ದಾಖಲಿಸಲಾಗಿರುವ 10 ಮಂದಿಯಲ್ಲಿ ಐವರು ಸಾಮಾಜಿಕ ಜಾಲತಾಣದ ಇನ್‌ ಫ್ಲುಯೆನ್ಸರ್ಸ್ ಸೇರಿದ್ದಾರೆ. ಇವರು ತಪ್ಪು ಮಾಹಿತಿ ಹರಡಿ ಶಾಂತಿ ಭಂಗ ಉಂಟುಮಾಡಿದ್ದಾರೆ ಎಂಬ ಆರೋಪವಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ತೆರವು ಕಾರ್ಯಾಚರಣೆಗೆ ಭದ್ರತೆ ಒದಗಿಸಲು ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ ತಂಡಗಳ ಮೇಲೆ ಮಹಿಳೆಯರೂ ಸೇರಿದಂತೆ ಒಂದು ಗುಂಪು ಕಲ್ಲು ತೂರಾಟ ನಡೆಸಿತು. ಘಟನೆಯಲ್ಲಿ ಅರ್ಧ ಡಝನ್‌ ಗೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries