ನವದೆಹಲಿ (PTI): ಜಿಡಿಪಿ ಬೆಳವಣಿಗೆ ಪ್ರಮಾಣವು ಅಂದಾಜುಗಳನ್ನು ಮೀರಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, 'ಭಾರತದ ಬಗ್ಗೆ ಯಾವಾಗಲೂ ಕೆಟ್ಟದ್ದನ್ನು ನಿರೀಕ್ಷೆ ಮಾಡುವವರು ಮುಳುಗಿದ್ದಾರೆ, ಭಾರತ ಮತ್ತೊಮ್ಮೆ ಬೆಳಗಿದೆ' ಎಂದು ಹೇಳಿದ್ದಾರೆ.
ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ 7.8ರಷ್ಟು ಬೆಳವಣಿಗೆ ಕಂಡಿರುವುದು 'ಭಗೀರಥ ಸಾಹಸ' ಎಂದು ಬಣ್ಣಿಸಿದ್ದಾರೆ.
'ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಗಳು ಇದ್ದಾಗಲೂ, ತೈಲ ಸಂಬಂಧಿ ಸಮಸ್ಯೆಗಳು ಹಾಗೂ ಪೂರೈಕೆ ವ್ಯವಸ್ಥೆಯಲ್ಲಿ ತೊಂದರೆಗಳು ಇದ್ದಾಗಲೂ ಇಲ್ಲಿನ ಸಮಷ್ಟಿಯ ಶಕ್ತಿಯ ಕಾರಣದಿಂದಾಗಿ ದೇಶವು ಈ ಪ್ರಮಾಣದ ಬೆಳವಣಿಗೆ ಸಾಧಿಸಿದೆ' ಎಂದು ಅವರು ಎಕ್ಸ್ ಬರಹದಲ್ಲಿ ಹೇಳಿದ್ದಾರೆ.
ಎನ್‌ಡಿಎ ಸರ್ಕಾರ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳು, ಅರ್ಥ ವ್ಯವಸ್ಥೆಯನ್ನು ಬಹಳ ಲವಲವಿಕೆಯಿಂದ ನಿರ್ವಹಣೆ ಮಾಡಿರುವುದು ಈಗ ಫಲಿತಾಂಶ ಕೊಡುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ.
'ಈ ಉತ್ತಮ ಫಲಿತಾಂಶದ ಶ್ರೇಯಸ್ಸು ದೇಶದ ಜನರಿಗೆ ಮತ್ತು ಅವರ ಶ್ರಮಕ್ಕೆ ಸಲ್ಲಸಬೇಕು' ಎಂದು ಅವರು ಎಕ್ಸ್ ಮೂಲಕ ತಿಳಿಸಿದ್ದಾರೆ.

