HEALTH TIPS

ಕೇರಳದಿಂದ ಮಂಗಳೂರು ರೈಲ್ವೇ ಆಡಳಿತಾತ್ಮಕ ವರ್ಗಾವಣೆ ಶುರು, ಕರಾವಳಿ ಈಗ ಆಪರೇಶನಲ್ ಹಬ್

ಬೆಂಗಳೂರು: ಕೇರಳದ ಪಾಲಕ್ಕಾಡ್ ಅಧೀನದಲ್ಲಿದ್ದ ಮಂಗಳೂರು ರೈಲ್ವೇ ವಲಯವನ್ನು ಮೈಸೂರು ಡಿವಿಶನ್‌ಗೆ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಇತ್ತೀಚೆಗೆ ಕೇಂದ್ರ ರೈಲ್ವೇ ಸಚಿವಾಲಯದ ಈ ನಿರ್ಧಾರ ಕರ್ನಾಟಕಕ್ಕೆ ಸಂತಸ ನೀಡಿದ್ದರೆ, ಕೇರಳದ ಅಸಮಾಧಾನಕ್ಕೆ ಕಾರಣವಾಗಿತ್ತು.

ಕೇರಳಗ ವಿರೋಧದ ನಡುವೆಯೂ ಆಡಳಿತಾತ್ಮಕ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಈ ಸಂಬಂಧ ಭಾರತೀಯ ರೈಲ್ವೇಯ ಮೈಸೂರು ವಿಭಾಗದ ಅಧಿಕಾರಿಗಳು ಹಾಗೂ ಪಾಲಕ್ಕಾಡ್ ವಿಭಾಗದ ಅಧಿಕಾರಿಗಳು ಗುರುವಾರ ಸಭೆ ಸೇರಲಿದ್ದಾರೆ.

ಆಸ್ತಿ, ಕಾರ್ಯಾಚರಣೆ ಸೇರಿ ಹಲವು ವರ್ಗಾವಣೆ

ಆಗಸ್ಟ್ 21ರಂದು ಕೇಂದ್ರ ರೈಲ್ವೇ ಸಚಿವಾಲಯ ಮಂಗಳೂರು ವಿಭಾಗವನ್ನು ಪಾಲಕ್ಕಾಡ್‌ನಿಂದ ಪ್ರತ್ಯೇಕಗೊಳಿಸಿ ಮೈಸೂರು ವಿಭಾಗಕ್ಕೆ ಸೇರಿಸುವ ನಿರ್ಧಾರ ಘೋಷಣೆ ಮಾಡಿತ್ತು. ಈ ಸಂಬಂಧ ಈಗಾಗಲೇ ಪ್ರಕ್ರಿಯೆಗಳು ಶುರುವಾಗಿದೆ. ರೈಲ್ವೇ ವಲಯಗಳ ಆಸ್ತಿಗಳ ವರ್ಗಾವಣೆ, ರೈಲು ಕಾರ್ಯಾಚರಣೆ, ವಲಯಗಳ ಜವಾಬ್ದಾರಿ, ಸಿಬ್ಬಂದಿಗಳ ಮೇಲಿನ ಜವಾಬ್ದಾರಿ ಸೇರಿದಂತೆ ಪ್ರತಿಯೊಂದು ವರ್ಗಾವಣೆಯಾಗಲಿದೆ. ಆದರೆ ಸದ್ಯಕ್ಕೆ ಸಿಬ್ಬಂದಿಗಳ ವರ್ಗಾವಣೆ ಪ್ರಕ್ರಿಯೆ ನಡೆಯುವುದಿಲ್ಲ ಎಂದು ರೈಲ್ವೇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಂಗಳೂರು ಪ್ರಮುಖ ರೈಲ್ವೇ ಕೇಂದ್ರ

ಪಾಲಕ್ಕಾಡ್‌ನಿಂದ ಮಂಗಳೂರು ರೈಲ್ವೇ ವಲಯವನ್ನು ಪ್ರತ್ಯೇಕಗೊಳಿಸಿ ಮೈಸೂರು ವಿಭಾಗಕ್ಕೆ ಸೇರಿಸಿದ ಕಾರಣ ಇದೀಗ ಮಂಗಳೂರು ಪ್ರಮುಖ ರೈಲ್ವೇ ಕೇಂದ್ರವಾಗಿ ಹೊರಹೊಮ್ಮಿದೆ. ಅಕ್ಟೋಬರ್ 1 ರಿಂದ ಸಂಪೂರ್ಣವಾಗಿ ಕಾರ್ಯಾಚರಣೆಗೆ ಸಿದ್ದವಾಗಲಿದೆ. ಪ್ಯಾಸೆಂಜರ್ ರೈಲು, ಸರಕರು ರೈಲು ಸೇರಿದಂತೆ ಪ್ರತಿ ದಿನ 100ಕ್ಕೂ ಹೆಚ್ಚು ರೈಲುಗಳಿಗೆ ಪ್ರಮುಖ ಕೇಂದ್ರವಾಗಿ ಮಂಗಳೂರು ಮಾರ್ಪಾಡಲಾಗಿದೆ.

ಮಂಗಳೂರು ಸೆಂಟ್ರಲ್‌ನಲ್ಲಿ ರೈಲ್ವೇ ಡಿಪೋ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ 17 ಜೋಡಿ ರೈಲು, ಎಕ್ಸ್‌ಪ್ರೆಸ್ ರೈಲಿನ 450 ಕೋಚ್ ಸೇರಿದಂತೆ ಕೆಲ ರೈಲುಗಳ ನಿರ್ವಹಣೆ ಮಾಡಲಾಗುತ್ತದೆ. ವರ್ಗಾವಣೆಯಿಂದ ಹೆಚ್ಚುವರಿ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಗುರುವಾರ ಮಂಗಳೂರಿನಲ್ಲ ರೈಲ್ವೇ ಅಧಿಕಾರಿಗಳು ಸಭೆ ಸೇರಿ ವರ್ಗಾವಣೆ ಪ್ರಕ್ರಿಯೆ ಸುಗಮ ಹಾಗೂ ಸುಸೂತ್ರವಾಗಿ ನಡೆಸಲು ಚರ್ಚೆ ನಡೆಸಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries