ಪಂದಳ: ಎನ್.ಎಸ್.ಎಸ್ ಪ್ರಧಾನ ಕಾರ್ಯದರ್ಶಿ ಜಿ. ಸುಕುಮಾರನ್ ನಾಯರ್ ಪ್ರಯಾಣಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಪತ್ತನಂತಿಟ್ಟ ಎಂಸಿ ರಸ್ತೆಯ ಪಂದಳಂ ಬಳಿಯ ಕುರಂಬಲ ಅಮೃತ ಶಾಲಾ ಜಂಕ್ಷನ್‍ನಲ್ಲಿ ಅಪಘಾತ ಸಂಭವಿಸಿದೆ. ಅವರು ಪ್ರಯಾಣಿಸುತ್ತಿದ್ದ ಕಾರು ಟೆಂಪೆÇೀ ವ್ಯಾನ್‍ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸುಕುಮಾರನ್ ನಾಯರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ ನಂತರ ಅವರು ಚಂಗನಶ್ಶೇರಿಯಲ್ಲಿರುವ ಎನ್.ಎಸ್.ಎಸ್ ಪ್ರಧಾನ ಕಚೇರಿಗೆ ಹಿಂತಿರುಗುತ್ತಿದ್ದರು. ಡಿಕ್ಕಿಯ ಪರಿಣಾಮ ಕಾರಿನ ಒಂದು ಬದಿ ತೀವ್ರವಾಗಿ ಹಾನಿಗೊಳಗಾಯಿತು. ಅವರೊಂದಿಗೆ ಇದ್ದ ಸಿಬ್ಬಂದಿ ಮತ್ತು ಸ್ಥಳೀಯ ಎನ್.ಎಸ್.ಎಸ್ ಕಾರ್ಯಕರ್ತರು ತಕ್ಷಣ ಅವರನ್ನು ಪಂದಳಂ ಎನ್.ಎಸ್.ಎಸ್ ವೈದ್ಯಕೀಯ ಮಿಷನ್ ಆಸ್ಪತ್ರೆಗೆ ಕರೆದೊಯ್ದರು.
ಅವರನ್ನು ಪರೀಕ್ಷಿಸಿದ ವೈದ್ಯರು ಗಾಯ ಗಂಭೀರವಾಗಿಲ್ಲ ಎಂದು ಹೇಳಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರು ಆಸ್ಪತ್ರೆಯಿಂದ ಹಿಂತಿರುಗಿದರು. ಟೆಂಪೆÇೀ ವ್ಯಾನ್‍ನಲ್ಲಿದ್ದ ಚಾಲಕ, ಇತರ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಪಂದಳಂ ಪೆÇಲೀಸರು ಸ್ಥಳಕ್ಕೆ ತಲುಪಿ ಮುಂದಿನ ಕ್ರಮ ಕೈಗೊಂಡರು.

