ಕಾಸರಗೋಡು: ಶ್ರೀ ಪುಷ್ಪಕ ಬ್ರಾಹ್ಮಣ ಸೇವಾ ಸಂಘದ 58ನೇ ಕೇಂದ್ರೀಯ ವಾರ್ಷಿಕ ಸಮ್ಮೇಳನ ಸೆ. 12 ಮತ್ತು 13 ರಂದು ವಿ.ಎಂ. ಕೃಷ್ಣನ್ ನಂಬೀಶನ್ ನಗರ(ಕಾಸರಗೋಡು ವಿದ್ಯಾನಗರ ಚೆಟ್ಟುಂಗುಳಿ ರಾಯಲ್ ಕನ್ವೆನ್ಷನ್ ಸೆಂಟರ್)ದಲ್ಲಿ ಜರುಗಲಿದೆ. ಉದ್ಘಾಟನಾ ಅಧಿವೇಶನ, ಪ್ರತಿನಿಧಿಗಳ ಅಧಿವೇಶನ, ಸಾಂಸ್ಕøತಿಕ ಸಂಜೆ, ಮಕ್ಕಳ ಪ್ರತಿಭಾ ಉತ್ಸವ, ಯುವ ಸಮ್ಮೇಳನ, ಮಹಿಳಾ ಸಮ್ಮೇಳನ, ಸಾಂಸ್ಕೃತಿಕ ಅಧಿವೇಶನ ಮತ್ತು ಸಮಾರೋಪ ಸಮಾರಂಭ ನಡೆಯಲಿವೆ. ಇದೇ ಸಂದರ್ಭ 2026-28ನೇ ಸಾಲಿನ ಕೇಂದ್ರ ಪದಾಧಿಕಾರಿಗಳ ಆಯ್ಕೆಯೂ ಇದರೊಂದಿಗೆ ನಡೆಯಲಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ವಿ.ಎಂ. ಕೃಷ್ಣಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಧೂರು ದೇವಸ್ಥಾನದ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ ಸಮ್ಮೇಳನ ಉದ್ಘಾಟಿಸುವರು. ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ಕೆ. ನೀಲಕಂಠನ್ ಶಾಸಕ ಪಾಲ್ಗೊಳ್ಳುವರು. ಖ್ಯಾತ ಸಂಗೀತ ಕಲಾವಿದ ವೆಳ್ಳಿಕ್ಕೋತ್ ವಿಷ್ಣು ಭಟ್ ಸಾಂಸ್ಕøತಿಕ ಸಂಜೆ, ಕೇರಳ ಸರ್ಕಾರದ ನಿವೃತ್ತ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಭಟ್ ಯುವ ಸಮ್ಮೇಳಮ, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜ್ಞಾನಿ ಎಸ್. ಶಾನ್‍ಭಾಗ್ ಮಹಿಳಾ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಡಾ. ಪ್ರದೀಪ್ ಜ್ಯೋತಿ ಸಾಂಸ್ಕತಿಕ ಸಮ್ಮೇಳನ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಸಮಾರೋಪ ಸಮಾರಂಭ ಉದ್ಘಾಟಿಸುವರು. ಕೇರಳ ಹಾಗೂ ಇತರ ರಾಜ್ಯಗಳ ಸುಮಾರು 1,500 ಮಂದಿ ಪ್ರತಿನಿಧಿಗಳು ಕಾಸರಗೋಡಿಗೆ ಆಗಮಿಸಲಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ಎಲ್.ಪಿ. ವಿಶ್ವನಾಥನ್, ಪ್ರಧಾನ ಕಾರ್ಯದರ್ಶಿ ಹರಿ ನಾರಾಯಣನ್ ಟಿ.ಆರ್. ಮತ್ತು ಖಜಾಂಚಿ ಪಿ.ಆರ್. ಹರಿ ಮೊದಲಾದವರುಪಾಲ್ಗೊಳ್ಳುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖ್ಯ ಸಂಯೋಜಕ ಸನೋಜ್ ಕೆ.ಎಂ., ಪ್ರಧಾನ ಸಂಚಾಲಕ ರಾಜೇಶ್ ಇ., ಜಿಲ್ಲಾಧ್ಯಕ್ಷ ನಾರಾಯಣನ್ ಎನ್.ಎಂ., ಪೆÇೀಷಕ ಯು.ಬಾಲಕೃಷ್ಣ, ಮತ್ತು ಸಂಚಾಲಕರಾದ ಸುಮಾ ದಿನೇಶ್, ಶ್ರೀದೇವಿ ಹರಿ ಆರ್., ಕೆ.ಪಿ. ರಾಜೀವನ್, ವಿಷ್ಣುಪ್ರಸಾದ್, ಜಯೇಶ್ ಉಪಸ್ಥಿತರಿದ್ದರು.

