HEALTH TIPS

ರಾತ್ರಿಯಲ್ಲಿ ದೀಪದಂತೆ ಬೆಳಗುವ ಸಸ್ಯಗಳನ್ನು ಸೃಷ್ಟಿಸಿದ ಚೀನಾ ವಿಜ್ಞಾನಿಗಳು!

ರಾತ್ರಿ ಇದ್ದಕ್ಕಿದ್ದಂತೆ ಕರೆಂಟ್ ಕಟ್ ಆಗುತ್ತದೆ. ಕತ್ತಲು ಆವರಿಸುತ್ತಿದ್ದಂತೆ ನಿಮ್ಮ ಮೇಜಿನ ಮೇಲೆ ಶೋ ಪೀಸ್‌ನಂತಿರುವ ಸಸ್ಯ ದೀಪದಂತೆ ಬೆಳಗಲು ಆರಂಭಿಸಿದರೆ ಎಷ್ಟು ಚೆನ್ನ ಅಲ್ವಾ.. ಚೀನಾದ ವಿಜ್ಞಾನಿಗಳು ಇಂತಹದ್ದೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಹೌದು, ಚೀನಾ ವಿಜ್ಞಾನಿಗಳು, ಕತ್ತಲೆಯಲ್ಲಿ ಬೆಳಗುವ ಮಳೆಬಿಲ್ಲಿನ ಬಣ್ಣದ ಸಸ್ಯಗಳನ್ನು ಸೃಷ್ಟಿಸುವ ಮೂಲಕ ಅದನ್ನು ಸಾಧ್ಯವಾಗಿಸಿದ್ದಾರೆ.


ಈ ಸಸ್ಯಗಳು ಕತ್ತಲೆಯಲ್ಲಿ ಹೇಗೆ ಬೆಳಗುತ್ತವೆ?

ಇದು ದಕ್ಷಿಣ ಚೀನಾ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರ ಸಾಧನೆಯಾಗಿದೆ. 'ಎಚೆವೆರಿಯಾ ಮೆಬಿನಾ' ಎಂಬ ರಸಭರಿತ ಸಸ್ಯಗಳ ಎಲೆಗಳಿಗೆ ವಿಶೇಷ ಫಾಸ್ಫರ್ ಕಣಗಳನ್ನು ಚುಚ್ಚಿದ್ದಾರೆ. ಈ ಕಣಗಳು ಹಗಲಲ್ಲಿ ಸೂರ್ಯನ ಬೆಳಕು ಅಥವಾ ಎಲ್‌ಇಡಿ ಬೆಳಕನ್ನು ಹೀರಿಕೊಂಡು ಶೇಖರಿಸಿಟ್ಟುಕೊಳ್ಳುತ್ತವೆ. ಕತ್ತಲಲ್ಲಿ ನಿಧಾನವಾಗಿ ಆ ಬೆಳಕನ್ನು ಬಿಡುಗಡೆ ಮಾಡುವ ಮೂಲಕ ಹೊಳಪನ್ನು ಸೃಷ್ಟಿಸುತ್ತವೆ. ಈ ಸಸ್ಯಗಳು ಎರಡು ಗಂಟೆಗಳವರೆಗೆ ಪ್ರಕಾಶಮಾನವಾಗಿ ಬೆಳಗುತ್ತವೆ ಎಂದು ಮನಿ ಕಂಟ್ರೋಲ್‌ನ ವರದಿ ತಿಳಿಸಿದೆ.

ಈ ಹಿಂದೆಯೂ ಸಸ್ಯಗಳ ಮೂಲಕ ಬೆಳಕು ಮೂಡಿಸುವ ಯತ್ನ ನಡೆದಿತ್ತು. ಆಗ, ನಡೆಸಿದ್ದ ಪ್ರಯೋಗದಲ್ಲಿ ಕೆಲ ನಿಮಿಷಗಳವರೆಗೆ ಮಾತ್ರ ಬೆಳಕು ಬೀರುವ ಸಸ್ಯಗಳು ತಯಾರಾಗಿದ್ದವು. ಇದಾದ ಬಳಿಕ, ವಸ್ತು-ಆಧರಿತ ಪ್ರಯೋಗಗಳಲ್ಲಿ 30 ನಿಮಿಷಗಳ ಕಾಲ ಬೆಳಗುವ ಫಲಿತಾಂಶ ಸಿಕ್ಕಿತ್ತು. ಬಳಿಕ, ವಿಜ್ಞಾನಿಗಳು, ಮೈಕ್ರಾನ್-ಗಾತ್ರದ ಫಾಸ್ಫರ್ ಕಣಗಳನ್ನು ಬಳಸಿ ಬೆಳಗುವ ಸಸ್ಯಗಳನ್ನು ಅಭಿವೃದ್ಧಿಪಡಿಸಲು ಮುಂದಾದರು. ಕೆಂಪು ರಕ್ತ ಕಣದಷ್ಟು ಅಗಲದ ಈ ಕಣಗಳನ್ನು ಸಸ್ಯಗಳಿಗೆ ಚುಚ್ಚುವ ಮೂಲಕ ದೀರ್ಘಕಾಲ ಬೆಳಕು ಹೊರಸೂಸುವ ಗಿಡಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಪ್ರಯೋಗವು ಎಲ್ಲ ಸಸ್ಯಗಳ ಮೇಲೂ ಕೆಲಸ ಮಾಡುತ್ತದೆಯೇ?

ಖಂಡಿತಾ ಇಲ್ಲ.. ಬೋಕ್ ಚಯ್, ಗೋಲ್ಡನ್ ಪೊಥೋಸ್ ಎಂಬ ಸಸ್ಯಗಳ ಮೇಲೂ ವಿಜ್ಞಾನಿಗಳು ಈ ಪ್ರಯೋಗ ನಡೆಸಿದ್ದು, ಅದು ವಿಫಲವಾಗಿದೆ. ಮೆಬಿನಾ ಸಸ್ಯದ ಎಲೆಗಳ ಜೀವಕೋಶಗಳ ನಡುವೆ ಅಂತರ ಹೆಚ್ಚಿರುವುದರಿಂದ, ಫಾಸ್ಪರ್ ಕಣಗಳು ಹರಡಲು ಸಾಧ್ಯವಾಗಿದೆ. ಈ ಮೂಲಕ ಈ ಸಸ್ಯಗಳ ಮೇಲೆ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹಸಿರು, ಕೆಂಪು, ನೀಲಿ ಮತ್ತು ಕಡು ನೇರಳೆ ಬಣ್ಣದ ಕಣಗಳನ್ನು ಚುಚ್ಚುವ ಮೂಲಕ ವಿಜ್ಞಾನಿಗಳು, ಬಹುಬಣ್ಣದ ಸಸ್ಯಗಳನ್ನು ತಯಾರಿಸಿದ್ದಾರೆ. ಹಸಿರು ಬಣ್ಣದ ಸಸ್ಯವು ಎರಡು ಗಂಟೆಗಳವರೆಗೆ ಬೆಳಕು ಬೀರಬಲ್ಲದ್ದಾಗಿದ್ದು, ಒಂದು ಸಣ್ಣ ದೀಪಕ್ಕೆ ಸಮಾನವಾಗಿದೆ. ವಿಜ್ಞಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹಲವು ಸಸ್ಯಗಳ ಒಂದು ವಾಲ್ ತಯಾರಿಸಿ, ಓದಲು, ಬರೆಯಲು ಸಾಧ್ಯವಾಗುವಷ್ಟು ಬೆಳಕನ್ನು ಸೃಷ್ಟಿಸಿದ್ದಾರೆ.

ಭವಿಷ್ಯದಲ್ಲಿ ಇವುಗಳ ಬಳಕೆ ಹೇಗೆ?

ಬೆಳಗುವ ಗಿಡಗಳು ಮುಂದೊಂದು ದಿನ ಬೀದಿ ದೀಪಗಳಿಗೆ ಪರ್ಯಾಯವಾಗಬಹುದು ಎಂದು ಅಧ್ಯಯನದಲ್ಲಿ ಭಾಗವಹಿಸಿದ್ದ ಪ್ರಮುಖ ಲೇಖಕ ಶಟಿಂಗ್ ಲಿಯು ಹೇಳಿದ್ದಾರೆ. ಸೂರ್ಯನ ಬೆಳಕು ಅಥವಾ ಒಳಾಂಗಣದ ಎಲ್‌ಇಡಿ ಲೈಟ್‌ಗಳಿಂದ ಕೆಲ ನಿಮಿಷಗಳಲ್ಲಿ ಈ ಸಸ್ಯಗಳನ್ನು ಚಾರ್ಜ್ ಮಾಡಬಹುದು. ಈ ಪ್ರಕಾಶಮಾನ ಸಸ್ಯಗಳು ಕಡಿಮೆ ಇಂಗಾಲ, ಅಲಂಕಾರಿಕ ಮತ್ತು ಪ್ರಾಯೋಗಿಕ ಬೆಳಕಿನ ಮೂಲವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಧಾನವು ಸರಳ, ಅಗ್ಗವಾಗಿದ್ದು, 10 ನಿಮಿಷಗಳಲ್ಲಿ ರೀಚಾರ್ಜ್ ಮೂಲಕ ಬೆಳಕನ್ನು ಮೂಡಿಸಬಹುದಾಗಿದೆ ಎಂದು ಆಗಸ್ಟ್ 27ರಂದು ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ. ಇದು ನಿಜಕ್ಕೂ ಮಾಂತ್ರಿಕ ಪ್ರಯೋಗ ಎಂದು ಬಣ್ಣಿಸಿರುವ ಲಿಯು, ಈ ಪ್ರಯೋಗವನ್ನು ಇತರೆ ಸಸ್ಯಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದಿದ್ದಾರೆ.

ಮಾಹಿತಿ: ಮನಿ ಕಂಟ್ರೋಲ್







 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries