ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಆರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಸಾಂಸ್ಕøಥಿಕ ಕಾರ್ಯಕ್ರಮದ ಅಂಗವಾಗಿ ಸೆ. 19ರಂದು ಸಂಜೆ 5,30ಕ್ಕೆ
'ಭಾವಸಾಗರ' (ರಿ) ಬೆಂಗಳೂರು ಇದರ ಗುರು ವಿದುಷಿ ಆರಭಿ ಇಹುಮನೆ ಶಿಷ್ಯವೃಂದದಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.
ರಾತ್ರಿ ಗಂಟೆ 7.30 ರಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಪ್ರಸಿದ್ಧ ಕಲಾವಿದರಿಂದ 'ಗದಾಯುದ್ಧ'ಯಕ್ಷಗಾನ ಬಯಲಾಟ ನಡೆಯುವುದು. ಭಾಗವತರಾಗಿ ರಾಮಕೃಷ್ಣ ಮಯ್ಯ, ಸಿರಿಬಾಗಿಲು, ಚೆಂಡೆ-ಮದ್ದಳೆಯಲ್ಲಿ ಲಕ್ಷ್ಮೀನಾರಾಯಣ ರಾವ್ ಅಡೂರು, ಗಣೇಶ ಭಟ್ ಬೆಳಾಲು, ಮುಮ್ಮೇಳದಲ್ಲಿ ಕೌರವನಾಗಿ ಶಂಭಯ್ಯ ಕಂಜರ್ಪಣೆ, ಭೀಮನಾಗಿ ಡಾ. ಶ್ರುತಕೀರ್ತಿ ರಾಜ, ಉಜಿರೆ, ಸಂಜಯನಾಗಿ ಉಜಿರೆ ಅಶೋಕ ಭಟ್, ಅಶ್ವತ್ಥಾಮನಾಗಿ ಶಿವಾನಂದ ಶೆಟ್ಟಿ, ಪೆರ್ಲ, ಬೇಹಿನಚರನಾಗಿ ಮಹಾಬಲೇಶ್ವರ ಭಟ್, ಭಾಗಮಂಡಲ, ಧರ್ಮರಾಯನಾಗಿ ವೈಕುಂಠ, ಏರ್ಲೆ-ಸಾಸ್ತಾನ, ಕೃಷ್ಣನಾಗಿ ಲಕ್ಷ್ಮಣ ಕುಮಾರ್, ಮರಕಡ, ಬಲರಾಮನಾಗಿ ಮಂಜುನಾಥ ರೈ, ಪೆರ್ಲ ಸಹಕರಿಸಲಿದ್ದಾರೆ.
20ರಂದು ಸಂಜೆ 6ಕ್ಕೆ ವಿದುಷಿ ಡಾ. ನಿತಿತಾ ಪುತ್ತೂರು ಅವರಿಂದ 'ಭರತನಾಟ್ಯ ಪ್ರಸ್ತುತಿ' - 'ನೃತ್ಯಾರ್ಚನೆ', ರಾತ್ರಿ 7.30 ರಿಂದ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ) ಸುರತ್ಕಲ್ ಪ್ರಸ್ತುತಪಡಿಸುವ 'ಕರ್ನಾಟಕ ಕಲಾಶ್ರೀ' ವಿದ್ವಾನ್ ಕೆ. ಚಂದ್ರಶೇಖರ ನಾವಡ ಬಳಗದವರಿಂದ 'ಶಾಸ್ತ್ರೀಯ ನೃತ್ಯರಂಜಿನಿ' ಕಾರ್ಯಕ್ರಮ ಜರುಗಲಿದೆ.


