ಕಾಸರಗೋಡು: ನಗರದ ಬಾಲಭವನ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಕಲೋತ್ಸವವನ್ನು ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ ನಾಯರ್. ಕೆ ಅವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ಶಾಲಾ ರಕ್ಷಕ ಶೀಕ್ಷಕ ಸಂಘ ಹಾಗೂ ಶಾಲಾ ಮೇನೇಜ್ ಮೆಂಟ್ ವತಿಯಿಂದ ನವೀಕೃತಗೊಳಿಸಿದ ವೇದಿಕೆಯನ್ನು ಕಾಸರಗೋಡು ನಗರಸಭಾ ಸ್ಥಾಯೀ ಸಮಿತಿ ಅಧ್ಯಕ್ಷೆ ಮೆಹರ್ನಿಶಾ ಹಮೀದ್ ಉದ್ಘಾಟಿಸಿ ಶಾಲೆಯ ಶಿಸ್ತು ಶುಚಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಅಸ್ಲಾಂ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಿಟಿಎ ಉಪಾಧ್ಯಕ್ಷೆ ಶೀಬಾ ಶಾಲಾ ಎಜುಕೇಷನ್ ಅಕಾಡೆಮಿಕಲ್ ಸಲಹಾಸಮಿತಿ ಸದಸ್ಯ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥನೆ ಹಾಡಿದರು. ರಾಧಾ ಟೀಚರ್ ಸ್ವಾಗತಿಸಿದರು. ಸುಶ್ಮಿತಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಪಿಟಿಎ ಕೋಶಾಧಿಕಾರಿ ಪೌಲೋಸ್ ವಂದಿಸಿದರು. ಕಲೋತ್ಸವ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು.


