ಉಪ್ಪಳ: ವಿಶ್ವ ಹಿಂದು ಪರಿಷತ್ ಪರಂಬಳ ಕಯ್ಯಾರು ಉಪಖಂಡ ಸಮಿತಿ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಪರಂಬಳ ಕಯ್ಯಾರು ಇವುಗಳ ಜಂಟಿ ಆಶ್ರಯದಲ್ಲಿ 23ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವು ಪರಂಬಳ ಕಯ್ಯಾರು ಶ್ರೀ ಭಾರತ ಮಾತಾ ಸೇವಾ ಟ್ರಸ್ಟ್‍ನ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ದೀಪ ಪ್ರಜ್ವಲನೆ, ಸಮಾರಂಭದ ಉದ್ಘಾಟನೆ, ಸ್ಥಳೀಯರಿಂದ ಮತ್ತು ಚೆರುವೋಳು ಅಕ್ಷಯನಗರ ಶ್ರೀ ವಿಷ್ಣುಕೃಪಾ ವ್ಯಾಯಾಮ ಶಾಲೆ ಹಾಗೂ ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇವುಗಳ ವತಿಯಿಂದ ಭಜನೆ ನಡೆಯಿತು.
ಧಾರ್ಮಿಕ ಸಭೆಯಲ್ಲಿ ಲೇಖಕ, ನಿರೂಪಕ ಎ.ಸುರೇಶ್‍ಕುಮಾರ್ ಮಂಗಲ್ಪಾಡಿ ಮುಖ್ಯ ಭಾಷಣ ಮಾಡಿದರು. ಉತ್ಸವ ಸಮಿತಿ ಅಧ್ಯಕ್ಷ ದಾಸಪ್ಪ ಸಾಮಾನಿ ಕುಡಾಲುಗುತ್ತು ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದು ಪರಿಷತ್‍ನ ಹಿರಿಯ ಕಾರ್ಯಕರ್ತ ಉಳುವಾನ ಶಂಕರ ಭಟ್ ಮತ್ತು ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಚಂದ್ರಾವತಿ ಎಂ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗಣೇಶ್ ಪೆÇನ್ನೆತ್ತೋಡು ವಂದೇ ಮಾತರಂ ಹಾಡಿದರು. ಗಿರೀಶ್‍ಕುಮಾರ್ ಕಯ್ಯಾರು ಸ್ವಾಗತಿಸಿ, ಗಣೇಶ್ ದಯಾನಂದ ವಂದಿಸಿದರು. ಸುಬ್ರಹ್ಮಣ್ಯ ಭಟ್ ಪೆರಿಯಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
