ಬದಿಯಡ್ಕ: ವಾಂತಿಚ್ಚಾಲು ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಿಂದ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಆರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಗೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಿ ಶ್ರೀಗಳ ಆಶೀರ್ವಾದ ಮಂತ್ರಾಕ್ಷತೆ ಪಡೆದುಕೊಳ್ಳಲಾಯಿತು. ಗೌರವಾಧ್ಯಕ್ಷ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ರಕ್ಷಾಧಿಕಾರಿ ಜಗನ್ನಾಥ ರೈ ಕೊರೆಕ್ಕಾನ, ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಕರ್ಮಿಗಳಾದ ರಾಮ ನಾಯ್ಕ ಉಪ್ಲೇರಿ, ಸುಕುಮಾರ ಉಪ್ಲೇರಿ, ಸದಸ್ಯರುಗಳಾದ ರಮೇಶ್ ಕುಲಾಲ್ ಮುಳಿಯಡ್ಕ, ಆನಂದ ಕುಲಾಲ್ ಬೈಕುಂಜ, ಶಿವರಾಮ ಸಾಲ್ಯಾನ್ ವಾಂತಿಚ್ಚಾಲು, ರವಿನಾಯ್ಕ ಒಣಿಲೆ, ರಾಮಚಂದ್ರ ಕುಲಾಲ್ ಕುಂಟಾಲುಮೂಲೆ, ಗ್ರಾಮ ಪಂಚಾಯಿತಿ ಸದಸ್ಯೆ ಲೀಲಾವತಿ ಕುಂಟಾಲುಮೂಲೆ, ಸುಮಂಗಲಿ, ಮಾತೃ ಸಂಘದ ಶ್ಯಾಮಲಾ ವಾಂತಿಚ್ಚಾಲು, ಸುಪ್ರೀತಾ ವಾಂತಿಚ್ಚಾಲು ಪಾಲ್ಗೊಂಡಿದ್ದರು.

.jpg)
