HEALTH TIPS

ಪೌರತ್ವಕ್ಕೂ ಮುನ್ನ ಮತದಾರರ ಪಟ್ಟಿಯಲ್ಲಿ ಹೆಸರು; ಸೋನಿಯಾ ಗಾಂಧಿ ವಿರುದ್ಧ ತನಿಖೆ ನಿರಾಕರಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶ ರದ್ದು; ಮತ್ತೆ ತನಿಖೆಗೆ ಆದೇಶ!

 ನವದೆಹಲಿ: 1983ರಲ್ಲಿ ಭಾರತೀಯ ಪೌರತ್ವ ಪಡೆಯುವುದಕ್ಕೂ ಮೂರು ವರ್ಷಗಳ ಮೊದಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು ಎಂಬ ಆರೋಪದ ಕುರಿತು ತನಿಖೆ ನಡೆಸಲು ನಿರಾಕರಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಸೋಮವಾರ ಪುರಸ್ಕರಿಸಿದೆ.


ವಿಶೇಷ ನ್ಯಾಯಾಧೀಶ ವಿಶಾಲ್ ಗೊಗ್ನೆ ಅವರು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ತಾವು ಆ ನಿರ್ಧಾರಕ್ಕೆ ಬರಲು ಕಾರಣವೇನೆಂದು ವಿವರಿಸದೆ ಆದೇಶ ಹೊರಡಿಸಿದ್ದಾರೆ ಎಂದು ಹೇಳಿ ಅದನ್ನು ರದ್ದುಗೊಳಿಸಿದರು.

ರೋಸ್ ಅವೆನ್ಯೂ ನ್ಯಾಯಾಲಯಗಳ 'ಸೆಂಟ್ರಲ್ ದೆಹಲಿ ಕೋರ್ಟ್ ಬಾರ್ ಅಸೋಸಿಯೇಷನ್'ನ ಉಪಾಧ್ಯಕ್ಷರಾದ ವಕೀಲ ವಿಕಾಸ್ ತ್ರಿಪಾಠಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಆದೇಶವನ್ನು ವಜಾಗೊಳಿಸಿದೆ.

'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ಸೆಕ್ಷನ್ 175(3) ಅನ್ನು ಪಾಲಿಸದಿರುವುದು — ನಿರ್ದಿಷ್ಟವಾಗಿ ಹೇಳುವುದಾದರೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ವಾದ ಆಲಿಸದಿರುವುದು ಮತ್ತು ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಸ್ಟೇಟಸ್ ರಿಪೋರ್ಟ್ ಪಡೆಯದಿರುವುದು — ಈ ಆದೇಶದಲ್ಲಿ ಕಾನೂನಿಗೆ ಸಂಬಂಧಿಸಿದ ಸ್ಪಷ್ಟ ದೋಷಕ್ಕೆ ಕಾರಣವಾಗಿದೆ' ಎಂದು ನ್ಯಾಯಾಧೀಶರು ಹೇಳಿದರು.

ಕಾನೂನಿನ ಅಡಿಯಲ್ಲಿ ಲಭ್ಯವಿದ್ದ ಎರಡು ಆಯ್ಕೆಗಳಾದ ಎಫ್‌ಐಆರ್ ದಾಖಲಿಸಲು ನಿರ್ದೇಶಿಸುವುದು ಅಥವಾ ಪರ್ಯಾಯವಾಗಿ ಬಿಎನ್‌ಎಸ್‌ಎಸ್ (BNSS) ಅಡಿಯಲ್ಲಿ ವಿಚಾರಣಾ ಪ್ರಕ್ರಿಯೆ ನಡೆಸುವುದು. ಇವುಗಳನ್ನು ಮ್ಯಾಜಿಸ್ಟ್ರೇಟ್ ಪರಿಗಣಿಸದಿರುವುದರಿಂದ, ಆ ಆದೇಶವು 'ಕಾರಣಗಳನ್ನು ವಿವರಿಸದ' ಸ್ವರೂಪದ್ದಾಗಿತ್ತು ಎಂದು ಅವರು ಹೇಳಿದರು.

ದೂರು ಗಂಭೀರ ಸ್ವರೂಪದ ಅಪರಾಧವೊಂದು ನಡೆದಿರುವುದನ್ನು ಸೂಚಿಸುತ್ತದೆಯೇ ಎಂಬ ಪ್ರಮುಖ ಅಂಶವನ್ನು ಪರಿಗಣಿಸುವ ಬದಲು, ಮ್ಯಾಜಿಸ್ಟ್ರೇಟ್ ಪೌರತ್ವದ ವಿಷಯದತ್ತ ಗಮನಹರಿಸಿದ್ದಾರೆ ಎಂದು ನ್ಯಾಯಾಧೀಶರು ಹೇಳಿದರು.

ಹೊಸ ವಾದಗಳನ್ನು ಆಲಿಸಿದ ನಂತರ ಸಮರ್ಥನೀಯ ಆದೇಶವೊಂದನ್ನು ಹೊರಡಿಸಲು ನ್ಯಾಯಾಲಯವು ಈ ವಿಷಯವನ್ನು ಮ್ಯಾಜಿಸ್ಟ್ರೇಟ್‌ಗೆ ಹಿಂತಿರುಗಿಸಿತು. ಸೆಪ್ಟೆಂಬರ್ 29ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಲಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries