ಚೆನ್ನೈ: ₹3.30 ಕೋಟಿ ವೆಚ್ಚದಲ್ಲಿ ತನ್ನ ಕ್ಯಾಂಪಸ್‌ನಲ್ಲಿ ಅತ್ಯಾಧುನಿಕ ರೊಬೋಟಿಕ್ಸ್ ಪ್ರಯೋಗಾಲಯವನ್ನು ಉದ್ಘಾಟಿಸಿರುವುದಾಗಿ ಐಐಟಿ ಮದ್ರಾಸ್ ಮಂಗಳವಾರ ತಿಳಿಸಿದೆ.
ಮೂಲಸೌಕರ್ಯ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ರೊಬೋಟಿಕ್ಸ್ ಮತ್ತು ಸ್ವಯಂಚಾಲಿತ ತಂತ್ರಜ್ಞಾನದ ಮೂಲಕ ಸಂಶೋಧನೆ, ನಾವೀನ್ಯ ಹಾಗೂ ಕೈಗಾರಿಕಾ ಕಾರ್ಯಗಳನ್ನು ಕ್ಷಿಪ್ರಗೊಳಿಸುವ ಉದ್ದೇಶವನ್ನು ಈ ಪ್ರಯೋಗಾಲಯ ಹೊಂದಿದೆ ಎಂದು ಐಐಟಿ ಮದ್ರಾಸ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

