HEALTH TIPS

ನೈತಿಕ ಗೂಂಡಾಗಿರಿ-ಮಹಿಳೆ, ಸ್ನೇಹಿತನಿಂದ ನಗ, ನಗದು ಎಗರಿಸಿದ ಐವರ ಬಂಧನ

ಕಾಸರಗೋಡು: ನೈತಿಕ ಗೂಂಡಾಗಿರಿ ಬೆದಂಕೆಯೊಡ್ಡಿ, ಯುವತಿ ಹಾಗೂ ಆಕೆಯ ಸ್ನೇಹಿತನ ನಗ-ನಗದು ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿಯನ್ನು ವಿದ್ಯಾನಗರ ಠಾಣೆ ಪೆÇಲೀಸ್ ಇನ್‍ಸ್ಪೆಕ್ಟರ್ ಪಿ. ಪ್ರಮೋದ್ ನೇತೃತ್ವದ ಪೆÇಲೀಸರು ಬಂಧಿಸಿದ್ದಾರೆ. ಮುಳಿಯಾರು ಪೆÇವ್ವಲ್‍ನ ಬಿ. ಶರೀಫ್ (42), ಚೆರ್ಕಳ ಸಂತೋಷ್ ನಗರದ ಮುಹಮ್ಮದ್ ಸಾಲೀಬ್ (22), ಆಲಂಪಾಡಿಯ ಅಬ್ದುಲ್ ರಶೀದ್ (36), ಚೆಂಗಳ ನಾಲ್ಕನೆ ಮೈಲು ನಿವಾಸಿಗಳಾದ ಉಮ್ಮರ್ ಮುಕ್ತಾರ್ (18), ಮುಹಮ್ಮದ್ ಶಿಹಾಸ್ (20) ಬಂಧಿತರು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. 


ಕಳೆದ ಜುಲೈ 21ರಂದು ವಿದ್ಯಾನಗರ ಠಾಣಾ ವ್ಯಾಪ್ತಿಯ ವಿವಾಹಿತೆಯ ಮನೆಗೆ ಅಕ್ರಮವಾಗಿ ನುಗ್ಗಿ ಮಹಿಳೆ ಹಾಗೂ ಈಕೆ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಮತ್ತು 15 ಸಾವಿರ ರೂ. ನಗದು ಎಗರಿಸಿದ್ದ ತಂಡ,  ನಂತರದ ದಿನಗಳಲ್ಲಿ ಮತ್ತೆ 40 ಸಾವಿರ ರೂಪಾಯಿ ನೀಡುವಂತೆ ಬೆದರಿಕೆಯೊಡ್ಡಿರುವುದಾಗಿ ಮಹಿಳೆ ಪೆÇಲೀಸರಿಗೆ ದೂರು ನೀಡಿದ್ದರು.  ಅದರಂತೆ ವಿದ್ಯಾನಗರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಈ ಸಂಬಂಧ ಇತರ ಆರೋಪಿಗಳನ್ನು ಬಂಧಿಸಿದ್ದರು.  ಪ್ರಕರಣದಲ್ಲಿ ಒಂದನೇ ಆರೋಪಿ ಶರೀಫ್ ವಿರುದ್ಧ ಅಪಹರಣ, ಕಳವು ಸೇರಿದಂತೆ ಹಲವು ಪ್ರಕರಣ ದಾಖಲಾಘಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries