ಕೋಝಿಕೋಡ್: ಪಲೋರಾ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಒನ್ ವಿದ್ಯಾರ್ಥಿಗಳನ್ನು ಪ್ಲಸ್ ಟು ವಿದ್ಯಾರ್ಥಿಗಳು ಥಳಿಸಿದ್ದಾರೆ ಎಂದು ದೂರಲಾಗಿದೆ. ರ್ಯಾಗಿಂಗ್ ವಿರೋಧಿಸಿದ ಕಾರಣ ಥಳಿಸಲಾಗಿದೆ ಎಂದು ಪ್ರಾಂಶುಪಾಲರಿಗೆ ದೂರು ಬಂದಿದೆ. ಥಳಿಸುತ್ತಿರುವ ದೃಶ್ಯಗಳು ಹೊರಬಂದಿವೆ.
ನಿನ್ನೆ ಸಂಜೆ ಶಾಲೆ ಮುಗಿದ ನಂತರ ಈ ಘಟನೆ ನಡೆದಿದೆ. ಗಾಯಗೊಂಡ ಪ್ಲಸ್ ಒನ್ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಪೋಲೀಸ್ ದೂರು ದಾಖಲಿಸುವುದಾಗಿ ಪೆÇೀಷಕರು ತಿಳಿಸಿದ್ದಾರೆ.


