ಪೆರ್ಲ: ಅಡ್ಕಸ್ಥಳ ಶ್ರೀರಾಮ ಸೇವಾಮಂಡಳಿ ವತಿಯಿಂದ 38ನೇ ವರ್ಷದ ಸರ್ವಜನಿಕ ಶ್ರೀಗಣೇಶೋತ್ಸವ ಸೆ. 14ರಂದು ಅಡ್ಕಸ್ಥಳ ಶ್ರೀರಾಮ ಮಂದಿರದಲ್ಲಿ ಜರುಗಲಿದೆ. ಬೆಳಗ್ಗೆ 8ಕ್ಕೆ ಗಣಪತಿ ಪ್ರತಿಷ್ಠೆ, 9ರಿಂದ ಸ್ಪರ್ಧೆಗಳು ನಡೆಯುವುದು. 11ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಬೆಂಗಳೂರು ಸಿಬಿಐ ಸೀನಿಯರ್ ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ ಅಧ್ಯಕ್ಷತೆ ವಹಿಸುವರು. ಬಾಲಗೋಕುಲ ಕಾಸರಗೋಡು ತಾಲೂಕು ಸಹಭಗಿನಿ ಶ್ರಾವ್ಯ ಶೆಟ್ಟಿ ಬೆದ್ರಡ್ಕ ಧಾರ್ಮಿಕ ಭಾಷಣ ಮಾಡುವರು. ಹೆಚ್ಚುವರಿ ಜಿಲ್ಲಾ ದಂಡಾಧಿಖಾರಿ(ಎಡಿಎಂ) ಉದಯಕುಮಾರ್ ಪೆರ್ಲ, ಎಣ್ಮಕಜೆ ಗ್ರಾಪಂ ಸದಸ್ಯ ಜಗದೀಶ್ ನಲ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮಧ್ಯಾಃನ 2ಗಂಟೆಗೆ ಭಕ್ತಿ ರಸಮಂಜರಿ, ಸಂಜೆ 4ಕ್ಕೆ ಬಹುಮಾನ ವಿತರಣೆ ನಡೆಯುವುದು. ಶ್ರೀರಾಂ ಮಹಿಳಾ ಸಂಘದ ಅಧ್ಯಕ್ಷೆ ಲಲಿತಾ ಪೈಸಾರಿ ಅಧ್ಯಕ್ಷತೆ ವಹಿಸುವರು. ಶಿಕ್ಷಕಿ ಅರ್ತಿಕಾ ಜಿ ಅತಿಥಿಯಾಗಿ ಭಾಗವಹಿಸುವರು.5ಕ್ಕೆ ಭಜನೆ, 5.30ಕ್ಕೆ ವಿಶೇಷ ರಂಗಪೂಜೆ, 6ಕ್ಕೆ ಶ್ರೀಮಹಾಗಣಪತಿ ಭವ್ಯ ಶೋಭಾಯಾತ್ರೆ, ಜಲಸ್ತಂಬನ ನಡೆಯುವುದು.


