ಪೆರ್ಲ: ಪೆರ್ಲ ಶ್ರೀ ಸಾರ್ವಜನಿಕ ಗಣೇಶೋತ್‍ಸವ ಸಮಿತಿ ವತಿಯಿಮದ 55ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ. 14ಹಾಗೂ 15ರಂದು ಪೆರ್ಲ ಶ್ರೀ ಸತ್ಯನಾರಶಯಣ ಮಂದಿರದಲ್ಲಿ ಜರುಗಲಿದೆ. 14ರಂದು ಬೆಳಗ್ಗೆ 7.30ಕ್ಕೆ ಗಣಪತಿ ಹೋಮ, 8ಕ್ಕೆ ಗಣಪತಿ ಪ್ರತಿಷ್ಠೆ, ವೇದಘೋಷ ನಡೆಯುವುದು. ಪೆರ್ಲ ಶ್ರೀ ವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ ಧ್ವಜರೋಹಣ ನಡೆಸುವರು. ನಂತರ ಭಜನೆ, ವಿವಿಧ ಸ್ಪರ್ಧೆಗಳು, ಮಧ್ಯಾಹ್ನ 2ರಿಂದ ಯಕ್ಷಗಾನ ವೈಭವ, ಸಂಜೆ 5ಕ್ಕೆ ಧಾರ್ಮಿಕ ಸಭೆ ನಡೆಯುವುದು. ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮುಖ್ಯ ಶಿಕ್ಷಕ ಎನ್. ಕೇಶವ ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಬೌದ್ಧಿಕ್ ಶಿಕ್ಷಣ ಪ್ರಮುಖ್ ಕೃಷ್ಣಪ್ರಸಾದ್ ಬದಿ ಧಾರ್ಮಿಕ ಭಾಷಣ ಮಾಡುವರು.
ಈ ಸಂದರ್ಭ ಸಾಧಕರಿಗೆ ಸನ್ಮಾನ, ಗೌರವ ಸಮರ್ಪಣೆ, ಪ್ರತಿಭಾ ಪುರಸ್ಕಾರ ನಡೆಯುವುದು. ರಾತ್ರಿ 8ರಿಂದ ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ತಂಡದಿಂದ 'ಗಣೇಶ ನೃತ್ಯಾಮೃತಂ'ಭರತನಾಟ್ಯ-ಜಾನಪದ ನೃತ್ಯ ಕಾರ್ಯಕ್ರಮ ನಡೆಯುವುದು. 15ರಂದು ಬೆಳಗ್ಗೆ ಗಣಪತಿ ಹೋಮ, ವಿವಿಧ ಸ್ಪರ್ಧೆಗಳು, ಶೋಭಾಯಾತ್ರೆ ನಡೆಯುವುದು. ಅಡ್ಕಸ್ಥಳ ಹೊಳೆಯಲ್ಲಿ ವಿಗ್ರಹದ ಜಲಸ್ತಂಬನ ನಡೆಯಲಿರುವುದು.


