HEALTH TIPS

ಬಾವಳಿಗುಳಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮಂಜೇಶ್ವರ: ವರ್ಕಾಡಿ ನರಿಂಗಾನ ಬಾವಳಿಗುಳಿಯಲ್ಲಿ 12ನೇ ವರ್ಷದ ಗಣೇಶೋತ್ಸವ ಸೆ. 14ರಂದು ಜರುಗಲಿದೆ. ಬೆಳಗ್ಗೆ ತಂತ್ರಿವರ್ಯ ವರ್ಕಾಡಿ ದಿನೇಶ್ ಕೃಷ್ಣ ತಂತ್ರಿ ಅವರ ಮುಂದಾಳತ್ವದಲ್ಲಿ ವಿವಿಧ ವೈದಿಕ ವಿಧಿ ವಿಧಾನ ಜರುಗಲಿದೆ.  ಮಧ್ಯಾಹ್ನ  ಶಾಂತಿಪಳಿಕೆ ಶ್ರೀ ಮಹಮ್ಮಾಯಿ ಭಜಕ ವೃಂದದಿಂದ ಭಜನಾ ಸಂಕೀರ್ತನೆ, ಮನೋರಂಜನಾ ಕಾರ್ಯಕ್ರಮ ದಂಗವಾಗಿ ಬೆಳಿಗ್ಗೆ 11.30 ರಿಂದ ದತ್ತಾಂಜನೇಯ ಕಲಾಬಳಗದ ರಾಮಾಡಿ ಕಣ್ವ ತೀರ್ಥ 70 ಕಲಾವಿದರ ಒಟ್ಟು ಸೇರಿಗೆಯಲ್ಲಿ ಭರತ ವರ್ಷ ವೈಭವ, ಮಧ್ಯಾಹ್ನ 1:30 ರಿಂದ ಫ್ರೆಂಡ್ಸ್ ಮಂಗಳೂರು ವತಿಯಿಂದ "ತೆಲಿಕೆ ಬಾಯಿ ನಿಲಿಕೆ" ಎಂಬ ಹಾಸ್ಯ ಕಾರ್ಯಕ್ರಮ, ಸಂಜೆ 3.30 ರಿಂದ ಶ್ರೀ ದುರ್ಗಾ ನಾಟ್ಯಾಲಂiÀ ವತಿಯಿಂದ ಶಾಸ್ತ್ರೀಯ ಹಾಗೂ ಜಾನಪದ ನೃತ್ಯ ಸಂಗಮ ನಡೆಯುವುದು.

ನಂತರನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ಆರೋಗ್ಯ ಖಾತೆ ಸಚಿವ ಯು.ಟಿ. ಖಾದರ್ ಅವರಿಗೆ ವಿಶೇಷ ಗೌರವಾಭಿನಂದನೆ, ಅಲ್ಲದೆ ವಿವಿಧ ರಂಗಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಗುವುದು. ನಂತರ ಶ್ರೀ ಗಣಪತಿ ವಿಸರ್ಜನಾಮೆರವಣಿಗೆ ಆರಂಭಗೊಳ್ಳಲಿದ್ದು, ಗಣೇಶನ ಭವ್ಯಶೋಭ ಯಾತ್ರೆಯು ಕೆದುಂಬಾಡಿ ನೆತ್ತಿಲ ಪದವು ಬಾವಳಿಗುಳಿ, ತೌಡುಗೋಳಿಯಾಗಿ ಶಾಂತಿಪಳಿಕೆ ಮಾರಿಗುಡಿ ಬಳಿ ಕೆರೆಯಲ್ಲಿ ವಿಸರ್ಜಿಸಲಾಗುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries