HEALTH TIPS

ಮಾದಕ ಪದಾರ್ಥ ಪ್ರಕರಣದಲ್ಲಿ ಸಿಲುಕಿಸಲು ಯತ್ನ ಆರೋಪ- ಪೈವಳಿಕೆ ಪಂಚಾಯತಿ ಸದಸ್ಯನ ವಿರುದ್ದ ಯುವಕ ಜಿಲ್ಲಾ ಪೋಲೀಸ್ ಅಧಿಕಾರಿಗೆ ದೂರು

ಕುಂಬಳೆ: ಮಾದಕ ಪದಾರ್ಥ ಪ್ರಕರಣದಲ್ಲಿ ಸಿಲುಕಿಸಲು, ವ್ಯಕ್ತಿ ಹತ್ಯೆ ನಡೆಸಲು ಪೈವಳಿಕೆ ಪಂಚಾಯತಿ ಸದಸ್ಯ ಸಕರಿಯಾ ಯಾನೆ ಜೆಕ್ಕಿ ಯತ್ನಿಸುತ್ತಿರುವುದಾಗಿ ಚಿಪ್ಪಾರು ನಿವಾಸಿಯಾದ ಯುವಕ ಉಮ್ಮರ್ ಫಾರೂಕ್ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ನೀಡಿದ ದೂರಿನಲ್ಲಿ ಪಂಚಾಯತಿ ಸದಸ್ಯನ ವಿರುದ್ಧ ಅವರು ಗಂಭೀರ ಆರೋಪ ಹೊರಿಸಿದ್ದಾರೆ. ತನ್ನ ಮಾಲಕತ್ವದಲ್ಲಿರುವ ಆಟೋ ಕಾರಿನಲ್ಲಿ ಮಾದಕ ಪದಾರ್ಥವಿದೆಯೆಂದು ತಿಳಿಸಿ ನಿರಂತರ ವಾಹನ ತಪಾಸಣೆಗೊಳಪಡಿಸಿ ಮಾನಸಿಕವಾಗಿ ಪೀಡಿಸುತ್ತಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಗಲ್ಫ್ ನಂಬ್ರಗಳಿಂದ ಕರೆಮಾಡಿ ಕೇರಳ, ಕರ್ನಾಟಕ ಪೆÇಲೀಸರಿಗೆ ತಪ್ಪು ಮಾಹಿತಿ ನೀಡಿ ತನ್ನನ್ನು ಬೇಟೆಯಾಡುತ್ತಿರುವುದಾಗಿ ಉಮ್ಮರ್ ಫಾರೂಕ್ ದೂರಿನಲ್ಲಿ ತಿಳಿಸಿದ್ದಾರೆ. ತಾನು ಕಾನೂನು ಅನುಸಾರವಾಗಿ ವ್ಯಾಪಾರ ನಡೆಸುವ ವ್ಯಕ್ತಿಯಾಗಿದ್ದು, ಇದುವರೆಗೆ ತನ್ನ ಭಾಗದಿಂದ ಕಾನೂನು ವಿರುದ್ಧವಾದ ಯಾವುದನ್ನೂ, ಕೇರಳ, ಕರ್ನಾಟಕ ಪೋಲೀಸರಿಗೆ ಪತ್ತೆಹಚ್ಚಲು. ಸಾಧ್ಯವಾಗಿಲ್ಲ.

ಸಕರಿಯಾರ ಮಣ್ಣು ಸಾಗಾಟ ದಂಧೆ ಕರ್ನಾಟಕ ಪೋಲೀಸರು ಪತ್ತೆಹಚ್ಚಿ ವಾಹನಗಳನ್ನು ಹಾಗೂ ಯಂತ್ರಗಳನ್ನು ಕಸ್ಟಡಿಗೆ ತೆಗೆದ ಘಟನೆಯಲ್ಲಿ ದೂರು ನೀಡಿರುವುದು ತಾನಾಗಿದ್ದೇನೆ ಎಂದು ತಪ್ಪಾಗಿ ತಿಳಿದು ನನ್ನನ್ನು ಕೇಸಿನಲ್ಲಿ ಸಿಲುಕಿಸಲು ಯತ್ನಿಸುತ್ತಿರುವುದಾಗಿಯೂ, ನನ್ನ ಜೀವಕ್ಕೆ ಬೆದರಿಕೆ ಇದೆಯೆಂದು ಉಮ್ಮರ್ ಫಾರೂಕ್ ಪೋಲೀಸ್ ಅಧಿಕಾರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries