HEALTH TIPS

ನೇಪಾಳದ ಪ್ರವಾಹದ ರೌದ್ರನರ್ತನಕ್ಕೂ ಜಗ್ಗದ ಮನೆ: ಕಟ್ಟಡ ಉಳಿದುಕೊಂಡಿದ್ದು ಹೇಗೆ?

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದ ಭೀಕರತೆ ಕುರಿತಾದ ವಿಡಿಯೊಗಳನ್ನು ವೀಕ್ಷಿಸಿದ ನೆಟ್ಟಿಗರು ಮಮ್ಮಲ ಮರುಗುತ್ತಿದ್ದಾರೆ.


ಭಾರಿ ಪ್ರವಾಹದ ದೃಶ್ಯಗಳು, ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಜನರು, ಕೆಲವೇ ನಿಮಿಷಗಳಲ್ಲಿ ಮನೆಗಳು ಕಣ್ಮರೆಯಾಗುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ನೈಸರ್ಗಿಕ ವಿಕೋಪಗಳು ಹಲವು ಬಾರಿ ನಂಬಲಾಗದ ಬದುಕಿನ ರೋಚಕ ಕಥೆಗಳನ್ನೂ ಉಳಿಸಿಹೋಗುತ್ತವೆ. ನೇಪಾಳದ ಪ್ರವಾಹದ ವಿನಾಶದ ನಡುವೆಯೂ ಅಂತಹದ್ದೇ ಒಂದು ಘಟನೆ ವರದಿಯಾಗಿದೆ.

ಹಸಿರು ಬಣ್ಣದ ಮನೆಯೊಂದು ಪ್ರವಾಹದ ರಭಸಕ್ಕೆ ಜಗ್ಗದೆ ನಿಂತಿದೆ. ಮನೆಯಲ್ಲಿದ್ದವರು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೌದು, ನೇಪಾಳದ ಮೂಲೆಯೊಂದರಲ್ಲಿ ಬಂಡೆಗಳು, ಕೆಸರು ಮತ್ತು ಬುಡಮೇಲಾದ ಮರಗಳಿಂದ ಕೂಡಿದ ಭಾರಿ ಪ್ರಮಾಣದ ನೀರು ಅತ್ಯಂತ ಅಪಾಯಕಾರಿ ವೇಗದಲ್ಲಿ ಹರಿಯುತ್ತಿತ್ತು. ಅದು ತನ್ನದೇ ಆದ ಹಾದಿಯನ್ನು ಸೃಷ್ಟಿಸಿಕೊಂಡು, ಕಟ್ಟಡಗಳನ್ನೆಲ್ಲ ಧ್ವಂಸಗೊಳಿಸಿತ್ತು. ಸುತ್ತಲೂ ಸಾವು, ವಿನಾಶದ ವಾತಾವರಣವಿದ್ದರೂ, ಒಂದು ಕುಟುಂಬ ತಮ್ಮ ಹಸಿರು ಬಣ್ಣದ ಮನೆಯಲ್ಲಿ ಬದುಕಿನ ಭರವಸೆ ಇಟ್ಟುಕೊಂಡಿತ್ತು.

ನಾಲ್ಕೂ ಕಡೆ ನೀರಿನಿಂದ ಆವೃತವಾಗಿದ್ದ ಅವರ ಮನೆ, ಪ್ರವಾಹದ ಹೊಡೆತವನ್ನು ತಡೆದುಕೊಳ್ಳಲಿ... ನಾವು ಬದುಕುಳಿಯುವಂತಾಗಲಿ ಎಂದು ಪ್ರಾರ್ಥಿಸುತ್ತಾ ಬಾಲ್ಕನಿಯಲ್ಲಿ ಕುಳಿತಿದ್ದರು. ಪ್ರವಾಹದ ನೀರು ಆರ್ಭಟಿಸುತ್ತಿದ್ದಂತೆ ಮನೆಯ ಸುತ್ತಲಿನ ಕಟ್ಟಡಗಳು ಕೊಚ್ಚಿಹೋದವು. ಆದರೆ, ರಭಸವಾಗಿ ಹರಿಯುತ್ತಿದ್ದ ನೀರು ಸುತ್ತುವರೆದಿದ್ದರೂ ಈ ಮನೆ ಮಾತ್ರ ಧೃತಿಗೆಡದೆ ಹಾಗೆಯೇ ನಿಂತಿತ್ತು.

ಪವಾಡಸದೃಶ ಎಂಬಂತೆ 'ಆ' ಮನೆ ಮತ್ತು ಮನೆಯಲ್ಲಿದ್ದವರು ಬಚಾವ್ ಆಗಿದ್ದಾರೆ.


The House in Green which survived against all Odds. Even the brutal wrath of Nature which destroyed everything in its path couldn't shake it's foundation. #Nepal #NepalDisaster







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries