HEALTH TIPS

ಆರ್ಥಿಕ ವ್ಯವಹಾರಗಳಲ್ಲಿ ನಿಗೂಢತೆ: ಮುಖ್ಯಮಂತ್ರಿ ಜನತೆಗೆ ಲೆಕ್ಕ ಕೊಡಬೇಕು- ಕೆ. ಸುರೇಂದ್ರನ್

ಕಾಸರಗೋಡು: ಮುಖ್ಯಮಂತಿ ಯವರ ಚಾರ್ಟರ್ಡ್ ವಿಮಾನ ಪ್ರಯಾಣ, ಸಚಿವರ ವಿದೇಶ ಪ್ರವಾಸಗಳು ಹಾಗೂ ಖಾಸಗಿ ಐಷಾರಾಮಿ ವಾಹನಗಳ ಬಳಕೆಯ ಹಿಂದಿನ ಆರ್ಥಿಕ ಮೂಲಗಳನ್ನು ಬಹಿರಂಗಪಡಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೆ. ಸುರೇಂದ್ರನ್ ಆಗ್ರಹಿಸಿದ್ದಾರೆ. ಪಿಣರಾಯಿ ವಿಜಯನ್ ಸರಕಾರ ಹತ್ತು ವರ್ಷಗಳಲ್ಲಿ ಮಾಡಿದ್ದನ್ನೆಲ್ಲಾ ಕೇವಲ ಮೂರೇ ತಿಂಗಳಲ್ಲಿ ಪುನರಾವರ್ತಿಸಲು ನೂತನ ಸರಕಾರ ಆತುರಪಡುತ್ತಿದೆ ಎಂದೂ ಅವರು ಆರೋಪಿಸಿದರು. 


ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಮಲಪ್ಪುರಂ ಪ್ರವಾಸಕ್ಕೆ ಚಾರ್ಟರ್ಡ್ ವಿಮಾನ ಉಚಿತವಾಗಿ ದೊರೆತಿದೆ ಎಂಬುದು ಸಂಶಯಾಸ್ಪದವಾಗಿದೆ. ಇದರ ವೆಚ್ಚವನ್ನು ಯಾರು ಭರಿಸಿದರು ಹಾಗೂ ಇದರ ಹಿಂದಿರುವ ಹಿತಾಸಕ್ತಿ ಏನು ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು ಎಂದು ಕೆ. ಸುರೇಂದ್ರನ್ ಆಗ್ರಹಿಸಿದ್ದಾರೆ. ಸಚಿವ ಕೆ.ಎಂ. ಶಾಜಿ ತಮ್ಮ ಸ್ನೇಹಿತನ ರೇಂಜ್ ರೋವರ್ ಕಾರನ್ನು ಅಧಿಕೃತ ಉದ್ದೇಶಕ್ಕಾಗಿ ಬಳಸುತ್ತಿರುವುದು ನಿಯಮ ಉಲ್ಲಂಘನೆಯಾಗಿದೆ. ಇದಕ್ಕೆ ನೀಡಲಾದ ಅನುಮತಿ, ಲಾಗ್‌ಬುಕ್ ವಿವರಗಳು ಹಾಗೂ ಕಣ್ಣೂರಿನ ಅನುದಾನಿತ ಶಾಲಾ ವಿಷಯಗಳೊಂ ದಿಗೆ ಇದಕ್ಕಿರುವ ಸಂಬಂಧವೇನು ಎಂಬುದನ್ನು ಜನತೆಯ ಮುಂದೆ ಬಹಿರಂಗಪಡಿಸಲು ಸರಕಾರ ಸಿದ್ಧವಾಗಬೇಕು ಎಂದರÀು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲು ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ ಪತ್ರ ಲಭಿಸಿದ್ದರೂ ಕ್ರಮ ಕೈಗೊಳ್ಳದಿರುವುದು ಪಿಣರಾಯಿ ವಿಜಯನ್ ಹಾಗೂ ಅವರ ಕುಟುಂಬವನ್ನು ರಕ್ಷಿಸಲೇ ಎಂಬ ಸಂಶಯ ಮೂಡುತ್ತಿದೆ. ‘ಪುನರ್ಜನಿ’ ಯೋಜನೆಗೆ ಸಂಬಂಧಿಸಿದಂತೆ ವಿ.ಡಿ. ಸತೀಶನ್ ವಿರುದ್ಧ ಈ ಹಿಂದೆ ನಡೆದ ಇ.ಡಿ ತನಿಖೆ ಹಾಗೂ ಹಣ ಸಂಗ್ರಹದ ವಿಚಾರವನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಾಗಿದೆ. ಮಂಡಲ-ಮಕರಜ್ಯೋತಿ ತೀರ್ಥಯಾತ್ರೆಗೆ ಕೆಲವೇ ವಾರಗಳು ಬಾಕಿ ಉಳಿದಿರುವಾಗ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ದೇವಸ್ವಂ ಮಂಡಳಿಯೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಭಕ್ತಾದಿಗಳಿಗೆ ಸಂಕಷ್ಟ ತಂದೊಡ್ಡಬಾರದು ಎಂದÀು ಕೆ. ಸುರೇಂದ್ರನ್ ಆಗ್ರಹಿಸಿದರು. 









 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries