HEALTH TIPS

'ಎನ್‌ಸಿಪಿಸಿಆರ್' ಎದುರು ಹಾಜರಾದ 'ಮೆಟಾ ಇಂಡಿಯಾ' ಅಧಿಕಾರಿಗಳು

ನವದೆಹಲಿ (PTI): ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ನಿಂದನೀಯ ಅಂಶಗಳ (ಸಿಎಸ್‌ಇಎಎಂ) ಜಾಹೀರಾತು ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳ ಒಡೆತನ ಹೊಂದಿರುವ 'ಮೆಟಾ' ಸಂಸ್ಥೆಯ ಹಿರಿಯ ಅಧಿಕಾರಿಗಳು ಮಕ್ಕಳಹಕ್ಕುಗಳ ರಕ್ಷಣಾ ರಾಷ್ಟ್ರೀಯ ಆಯೋಗದ (ಎನ್‌ಸಿಪಿಸಿಆರ್) ಎದುರುಬುಧವಾರ ಹಾಜರಾಗಿದ್ದಾರೆ.

ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆಯಪ್ ಮಾಲೀಕತ್ವವನ್ನು ಮೆಟಾ ಹೊಂದಿದೆ.

ಸಿಎಸ್‌ಇಎಎಂ ಜಾಹೀರಾತು ಪ್ರಕಟಣೆಗೆ ಸಂಬಂಧಿಸಿ, ಮಾಧ್ಯಮ ವರದಿಗಳ ಆಧಾರದಲ್ಲಿ ಜುಲೈ 3ರಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಆಯೋಗವು, ಮೆಟಾ ಸಂಸ್ಥೆಯಿಂದ ವಿವರಣೆ ಕೇಳಿತ್ತು. ಮೆಟಾ ಪ್ರತಿಕ್ರಿಯೆಯನ್ನೂ ಸಲ್ಲಿಸಿತ್ತು. ಈ ವಿಚಾರ ವಾಗಿ ತನಿಖೆ ನಡೆಸಲು ನಿರ್ಧರಿಸಿದ ಆಯೋಗವು, ಮೆಟಾ ಭಾರತ ಘಟಕದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯಸ್ಥರಿಗೆ ನೋಟಿಸ್ ನೀಡಿತ್ತು.

'ನಗ್ನತೆ ಮತ್ತು ಲೈಂಗಿಕ ಅಭಿವ್ಯಕ್ತಿಯ ಜಾಹೀರಾತನ್ನು ನಿರ್ಬಂಧಿಸುವ ಸ್ಪಷ್ಟ ನಿಯಮಗಳನ್ನು ಮೆಟಾ ಹೊಂದಿರುವ ಹೊರತಾಗಿಯೂ, ಮೆಟಾದ ಆಲ್ಗೊರಿದಂಗಳು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿಇಂಥ ವಿಡಿಯೊಗಳನ್ನು ಬಳಕೆದಾರರಿಗೆ ಪ್ರದರ್ಶಿಸು ತ್ತಿದ್ದವು. ಇದು ಸುರಕ್ಷಾ ಕ್ರಮಗಳಲ್ಲಿನ ಗಂಭೀರ ಅಂತರವನ್ನು ಬಹಿರಂಗಗೊಳಿಸಿದೆ' ಎಂದು ಬಿಬಿಸಿ ಸಂಸ್ಥೆಯ ತನಿಖಾ ವರದಿಯಲ್ಲಿ ಆರೋಪಿಸಲಾಗಿತ್ತು. 'ಅತ್ಯಾಚಾರ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಡಿಯೊಗಳ ಜಾಹೀರಾತು ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಅಂಥ ವಿಡಿಯೊಗಳು ಟೆಲಿಗ್ರಾಮ್‌ನಲ್ಲಿ ಮಾರಾಟಕ್ಕಿವೆ ಎಂಬ ಮಾಹಿತಿಯನ್ನೂ ನೀಡಲಾಗುತ್ತಿತ್ತು' ಎಂಬ ಆರೋಪಗಳು ಕೇಳಿಬಂದಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries