HEALTH TIPS

ಕಾಂಗ್ರೆಸ್‌ನದ್ದು 'ಭಾರತ ವಿರೋಧಿ ಮನಃಸ್ಥಿತಿ': ನಿತಿನ್‌

ನವದೆಹಲಿ (PTI): ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಲು ಆಕ್ಷೇಪಿಸುತ್ತಿರುವುದು ಕಾಂಗ್ರೆಸ್‌ನ 'ಭಾರತ ವಿರೋಧಿ ಮನಸ್ಥಿತಿ'ಯನ್ನು ತೋರಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ಅವರು ಬುಧವಾರ ಟೀಕಿಸಿದರು.

ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದ ಪ್ರಧಾನ ಕಚೇರಿಯಲ್ಲಿ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಅವರು, 'ದೇಶದ 'ವೀರಗೀತೆ'ಯೊಂದಿಗೆ ಬೆಸೆದುಕೊಂಡು ತ್ಯಾಗ ಮಾಡಿದ ಲಕ್ಷಾಂತರ ಹುತಾತ್ಮರಿಗೆ ಮಾಡಿದ ಅವಮಾನ ಎಂದು ಅದನ್ನು ಪರಿಗಣಿಸುತ್ತೇವೆ.

ಇದು ಕಾಂಗ್ರೆಸ್‌ನ ಅರಾಜಕತೆಯ ಮನಸ್ಥಿತಿ' ಎಂದು ಹೇಳಿದರು.

'ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ 'ಛಾತ್ರೋಂ ಕಿ ಗೂಂಜ್‌'(ವಿದ್ಯಾರ್ಥಿಗಳ ಧ್ವನಿ) ಅಭಿಯಾನವು ಅವರ ಕಾರ್ಯಕರ್ತ ರನ್ನು ದಾಟಿ ಮುಂದೆ ಹೋಗುವುದಿಲ್ಲ' ಎಂದು ಪ್ರಶ್ನಿಸಿದರು.

ಅವರ 'ಗೂಂಜ್‌' (ಧ್ವನಿ) ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಆದರೆ ನಮ್ಮ ಧ್ವನಿಯು ದೇಶದ 140 ಕೋಟಿ ಜನರನ್ನು ಗಮನದಲ್ಲಿಟ್ಟುಕೊಂಡಿರುತ್ತದೆ' ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries