ಕುಂಬಳೆ: ಅನಧಿಕೃತ ಮರಳು ಸಂಗ್ರಹ, ಸಾಗಾಟದ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಕುಂಬಳೆ ಠಾಣೆ ಪೆÇಲೀಸರು ಎರಡುಕಡೆ ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಮೂರು ದೋಣಿಗಳನ್ನು ವಶಪಡಿಸಿ ಜೆಸಿಬಿ ಬಳಸಿ ನಾಶಗೈದಿದ್ದಾರೆ. ಮರಳು ಸಂಗ್ರಹಿಸುತ್ತಿದ್ದ ಎರಡು ಅನಧಿಕೃತ ¸ಕಡವುಗಳನ್ನೂ ನಾಶಗೊಳಿಸಿದ್ದಾರೆ.
ಮೊಗ್ರಾಲ್ ಕೆ.ಕೆ ಪುರದಲ್ಲಿ ಗುರುವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಮರಳು ಸಂಗ್ರಹಿಸುತ್ತಿದ್ದ ಮೂರು ಫೈಬರ್ ದೋಣಿಗಳನ್ನು ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ. ಇವುಗಳನ್ನು ಹೊಳೆ ಮಧ್ಯೆ ಇರುವ ಕಾಂಡ್ಲಾ ಕಾಡುಗಳ ಮಧ್ಯೆ ಬಚ್ಚಿಟ್ಟ ಸ್ಥಿತಿಯಲ್ಲಿರಿಸಲಾಗಿದ್ದು, ಪೊಲೀಸರು ಹುಡುಕಾಟ ನಡೆಸಿ ದಡಕ್ಕೆ ತಲುಪಿಸಿ ನಾಶಗೈದಿದಾರೆ. ಮರಳು ಸಂಗ್ರಹಿಸಲು ಸಜ್ಜುಗೊಳಿಸಲಾಘಿದ್ದ ಕಡವನ್ನು ಜೆಸಿಬಿ ಮೂಲಕ ಸಮತಟ್ಟುಗೊಳಿಸಿದ್ದಾರೆ. ಇನ್ನೊಂದುಕಾರ್ಯಾಚರಣೆಯಲ್ಲಿ ಶಿರಿಯ ಹೊಳೆಯ ಪಾಚಾಣಿ ಎಂಬಲ್ಲಿ ಒಂದು ದೋಣಿ ಹಾಗೂ ಅನಧಿಕೃತ ಕಡವನ್ನು ನಾಶಗೊಳಿಸಿದ್ದಾರೆ.
ಜತೆಗೆ ಮರಳು ಸಾಗಾಟಕ್ಕೆ ವಾಹನಗಳಿಗೆ ರಸ್ತೆ ಸೌಕರ್ಯ ಒದಗಿಸಿಕೊಡುವ ಸ್ಥಳದ ಮಾಲಿಕರ ವಿರುದ್ಧ ಕೇಸು ದಾಖಲಿಸುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಎಸ್‍ಐ ಕೆ.ಪಿ ಗಣೇಶನ್, ಎಎಸ್‍ಐ ಅತುಲ್ ರಾಮ್, ಸಿವಿಲ್ ಪೋಲೀಸ್ ಆಫೀಸರ್‍ಗಳಾದ ಸುಧೀಶ್, ಹರೀಂದ್ರನ್ ಎಂಬವರು ಕಾರ್ಯಾಚರಣೆ ತಂಡದಲ್ಲಿದ್ದರು.*


