ಉಪ್ಪಳ: ಜ್ವರಬಾಧಿಸಿ ಚಿಕಿತ್ಸೆಯಲ್ಲಿದ್ದ ಪಡೆಯುತ್ತಿದ್ದ ಕುರುಡಪದವು ಬಳಿಯ ಬಂಡಿಮಾರ್ ಕುರಿಯ ನಿವಾಸಿ ದಿ. ರಾಮಣ್ಣ ಭಂಡಾರಿ ಎಂಬವರ ಪುತ್ರ, ಬೇಕರಿ ಉದ್ಯೋಗಿ ಮನೋಜ್ ಕುಮಾರ್ (43) ಮೃತಪಟ್ಟಿದ್ದಾರೆ. ಬಿ.ಸಿ ರೋಡ್‍ನಲ್ಲಿ ಸಹೋದರ ಪ್ರಶಾಂತ್ ಅವರ ಬೇಕರಿಯಲ್ಲಿ ದುಡಿಯುತ್ತಿದ್ದರು. ಹಲವು ದಿನಗಳ ಹಿಂದೆ ಜ್ವರ ಬಾಧಿಸಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಮತ್ತೆ ಜ್ವರ ಮರುಕಳಿಸಿದ್ದು, ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿರುವ ಮಧ್ಯೆ ಮೃತಪಟ್ಟಿದ್ದಾರೆ. ಕುರುಡಪದವು ಶ್ರೀರಾಮ್ ಫ್ರೆಂಡ್ಸ್ ಕ್ಲಬ್, ಶ್ರೀರಾಮ ಭಜನಾ ಮಂದಿರ ಹಾಗೂ ಶ್ರೀ ಅಯ್ಯಪ್ಪ ಮಂದಿರದ ಸಕ್ರಿಯ ಕಾರ್ಯಕರ್ತರಾಗಿದ್ದರು.

