HEALTH TIPS

ಕಾರು, ಆಟೋ ಡಿಕ್ಕಿ-ಆಟೋ ಚಾಲಕನ ರಕ್ಷಿಸಿದ ಅಗ್ನಿಶಾಮಕದಳ: ಪ್ರಯಾಣಿಕರಿಗೂ ಗಾಯ

ಕಾಸರಗೋಡು: ಕಾರು ಮತ್ತು ಆಟೋ ರಿಕ್ಷಾ ಡಿಕ್ಕಿಯಾಗಿ,  ಆಟೋದಲ್ಲಿ ಸಿಲುಕಿಕೊಂಡ ಆಟೋ ಚಾಲಕನನ್ನು ಅಗ್ನಿಶಾಮಕದಳ ರಕ್ಷಿಸಿದೆ. ಆಟೋಚಾಲಕ ಚೆಂಗಳ ಬಾರಿಕ್ಕಾಡಿನ ಪಿ.ಬಿ. ದಾಮೋದರನ್ (63) ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದವರು.  ಆಟೋ ಪ್ರಯಾಣಿಕರಾದ ಕಲ್ಲಕಟ್ಟ ನಿವಾಸಿಗಳಾದ ರಾಜೇಶ್ವರಿ (48) ಮತ್ತು ಎಂಡೋಸಲ್ಫಾನ್ ಸಂತ್ರಸ್ತೆಯಾಗಿರುವ ಪುತ್ರಿ ಅಂಜಲಿ (23) ಕೂಡಾ ಗಾಯಗೊಂಡಿದ್ದು, ಅವನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರಾಜೇಶ್ವರಿ ಹಾಗೂ ಅಂಜಲಿ ಆಣಂಗೂರಿನ ಆಯುರ್ವೇದ ಆಸ್ಪತ್ರೆಯಿಂದ ಔಷಧ ಪಡೆದು  ಮನೆಗೆ ವಾಪಸಾಗುವ ಮಧ್ಯೆ, ಅಪಘಾತ ಸಂಭವಿಸಿದೆ.  ಅಪಘಾತದಿಂದ ರಿಕ್ಷಾಚಾಲಕ ದಾಮೋದರನ್ ಗಾಯಗೊಂಡು ಹೊರ ಬರಲು ಸಾಧ್ಯವಾಗದೆ ಆಟೋ ರಿಕ್ಷಾದೊಳಗೆ ಸಿಲುಕಿಕೊಂಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಇವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries