ಕುಂಬಳೆ: ನಕಲಿ ನಂಬ್ರ ಪ್ಲೇಟ್ ಅಳವಡಿಸಿದ ಕಾರು ವಶಪಡಿಸಿಕೊಂಡಿರುವ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಕಯ್ಯಾರು ಮೇರ್ಕಳ ಕಯ್ಯಾರು ಹೌಸ್‍ನ ಮೂಸಾ ಅಫ್ಸಲ್ (26) ಮತ್ತು ಇಚ್ಚಂಪಾಡಿ ಗ್ರಾಮದ ಪಟ್ಟೆಬೆಲ್ ಪಳ್ಳತೋಟಿ ನಿಜಾಮ್ ಮಂಜಿಲ್‍ನ ನಿಜಾಮುದ್ದೀನ್ (19) ಬಂಧಿತರು.
ಕುಂಬಳೆ ಪೆÇಲೀಸ್ ಠಾಣೆಯ ಎಸ್‍ಐ ಗಣೇಶನ್ ಕೆ.ಪಿ.ಯವರ ನೇತೃತ್ವದ ಪೆÇಲೀಸರ ತಂಡ ಕಯ್ಯಾರು ಗ್ರಾಮದ ಚೆರ್ವಾನ ರೆಸಾರ್ಟ್‍ನ ಬಳಿ ಶಂಕಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಕಾರನ್ನು ಪತ್ತೆಹಚ್ಚಿದ್ದು, ತಪಾಸಣೆಗೊಳಪಡಿಸಿದಾಗ ಆ ಕಾರಿನ ಅಸಲಿ ನಂಬ್ರ ಪ್ಲೇಟನ್ನು ಬದಲಾಯಿಸಿ ಅದನ್ನು ಕಾರಿನೊಳಗಿರಿಸಿ, ನಕಲಿ ನಂಬ್ರಪ್ಲೇಟನ್ನು ಕಾರಿಗೆ ಅಳವಡಿಸಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಆಖಲಿಸಿಕೊಮಡಿರುವ ಪೊಲೀಸರು ಸಮಗ್ರ ವಿಚಾರಣೆ ನಡೆಸುತ್ತಿದ್ದಾರೆ.


