HEALTH TIPS

ಕಾಸರಗೋಡಿನಲ್ಲೀ ಬಾಂಗ್ಲಾ ಅಕ್ರಮ ನುಸುಳುಕೋರರು?- ತನಿಖೆ ವಿಸ್ತರಿಸಿದ ಕೇಂದ್ರ ಗುಪ್ತಚರ ವಿಭಾಗ

ಕಾಸರಗೋಡು: ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಯೂರ ತೊಡಗಿರುವ ಬಾಂಗ್ಲಾದೇಶಿಯರ ಸಂಖ್ಯೆ ಕೇರಳದಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ವಿಭಾಗಮಾಹಿತಿ ಸಂಗ್ರಹಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಗುಪ್ತಚರ ವಿಭಾಗ ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸಿದೆ. 


ಭಾರತದ ಗಡಿ ಪ್ರದೇಶಗಳಲ್ಲಿ ನೆಲೆಸಿರುವ ಅಕ್ರಮ ವಿದೇಶಿ ವಲಸಿಗರನ್ನು ಪತ್ತೆಹಚ್ಚಲು ಕೇಂದ್ರ ಚುನಾವಣಾ ಆಯೋಗ ಆರಂಭಿಸಿದ ಎಸ್‍ಐಆರ್ ಕ್ರಮಕ್ಕೆ ಅಂಜಿದ ಅಕ್ರಮ ನುಸುಳುಕೋರರು ಕೇರಳಕ್ಕೆ ಆಗಮಿಸಿ ನೆಲೆಕಂಡುಕೊಳ್ಳುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿದ್ದು, ಇವರಲ್ಲಿ ಬಹುತೇಕ ಮಂದಿ ಬಾಂಗ್ಲಾದೇಶದವರಾಗಿದ್ದಾರೆ. ತಮ್ಮನ್ನು ಬಂಗಾಳ ನಿವಾಸಿಗಳೆಂದು ಪರಿಚಯಿಸಿಕೊಂಡು ಕೇರಳದ ವಿವಿಧ ಜಿಲ್ಲೆಗಳಲ್ಲಿ ಕೆಲಸ ನಡೆಸುತ್ತಿದ್ದಾರೆ. ಇತ್ತೀಚೆಗೆ ಕಣ್ಣೂರು ಹಾಗೂ ಕೊಟ್ಟಾರಕ್ಕರೆಯಿಂದ ಹಲವು ಮಂದಿ ಬಾಂಗ್ಲಾದೇಶಿಯರನ್ನು ಪೆÇಲೀಸರು ದಿನಗಳ ಹಿಂದೆ ಸೇರಿಹಿಡಿದಿದ್ದಾರೆ.

ಹೀಗೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸುವ ಬಾಂಗ್ಲಾದೇಶೀಯರರಿಗೆ ಅಗತ್ಯದ ನಕಲಿ ದಾಖಲುಪತ್ರಗಳನ್ನು ಸೃಷ್ಟಿಸಿಕೊಡುವ ಹಾಗೂ ಭಯೋತ್ಪಾದಕ ಸಂಘಟನೆಗೊಂದಿಗೆ ನಂಟು ಹೊಂದಿರುವ ಮಾಫಿಯಾ ತಂಡವೊಂದು ಬೆಂಗಳೂರು ಕೇಂದ್ರೀಕರಿಸಿ ಕಾರ್ಯವೆಸಗುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿದೆ. ಅಕ್ರಮ ನುಸುಳುಕೋರ ಬಾಂಗ್ಲಾ ನಿವಾಸಿಗಳಲ್ಲಿಕೆಲವರು ಕಾಸರಗೋಡು ಜಿಲ್ಲೆಗೂ ಪ್ರವೇಶಿಸಿ ಇಲ್ಲಿ ಠಿಕಾಣಿ ಹೂಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ವಿಭಾಗ ಕಾಸರಗೋಡಿಗೂ ತನಿಖೆ ವಿಸ್ತರಿಸಿದೆ.




 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries