ಟೆಹರಾನ್: ಅಧಿಕೃತ ಮಾಹಿತಿಯನ್ನು ಪ್ರಸಾರ ಮಾಡಲು ಸರಕಾರಿ ಏಜೆನ್ಸಿಗಳು ಪಾಶ್ಚಿಮಾತ್ಯ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ಗಳನ್ನು ಬಳಸುವುದನ್ನು ತಡೆದಿದ್ದ ನಿಷೇಧವನ್ನು ಇರಾನ್ ಹಿಂತೆಗೆದುಕೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.
ಈ ನಿರ್ಧಾರವನ್ನು ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಪೂರ್ಣ ಸಮ್ಮತಿಯೊಂದಿಗೆ ಮತ್ತು ಸರ್ವೋಚ್ಛ ನಾಯಕ ಮುಜ್ತಬಾ ಖಾಮಿನೈ ಅವರ ಅನುಮೋದನೆಯ ನಂತರ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ಅಬ್ಬಾಸ್ ಪಜುಕಿ ತಿಳಿಸಿದ್ದಾರೆ.
ಈ ನಿರ್ಧಾರವು ಸರಕಾರಿ ಏಜೆನ್ಸಿಗಳು ಅಧಿಕೃತ ಮಾಹಿತಿ ಪ್ರಸಾರಕ್ಕಾಗಿ ವಿದೇಶಿ ಮೆಸೇಜಿಂಗ್ ಅಪ್ಲಿಕೇಶನ್‍ಗಳನ್ನು ಬಳಸಲು ಅನುಮತಿಸುತ್ತದೆ. ಸರಕಾರಿ ಏಜೆನ್ಸಿಗಳು ಈಗ ಅಧಿಕೃತ ಸಂವಹನಕ್ಕಾಗಿ ವಿದೇಶಿ ಪ್ಲಾಟ್‍ಫಾರ್ಮ್‍ಗಳನ್ನು ಬಳಸಲು ಸಾಧ್ಯವಾಗುತ್ತದೆಯಾದರೂ, ಸಾರ್ವಜನಿಕ ಇಂಟರ್ನೆಟ್ ಪ್ರವೇಶದ ಮೇಲಿನ ವ್ಯಾಪಕ ನಿರ್ಬಂಧಗಳು ಜಾರಿಯಲ್ಲೇ ಇರುತ್ತವೆ ಎಂದು ವರದಿಯಾಗಿದೆ.

