HEALTH TIPS

ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನಿಯರ ಸುರಕ್ಷತೆಯ ಜವಾಬ್ದಾರಿ ಇಸ್ರೇಲ್ ಮೇಲಿದೆ: ಅಮೆರಿಕ

ರಮಲ್ಲಾ: ಪಶ್ಚಿಮ ದಂಡೆಯಲ್ಲಿ ಹಲ್ಲೆಗೊಳಗಾದ ಫೆಲೆಸ್ತೀನಿಯರ ಸುರಕ್ಷತೆಯ ಜವಾಬ್ದಾರಿ ಇಸ್ರೇಲ್ ಸರಕಾರದ ಮೇಲಿದೆ ಹಾಗೂ ಹಿಂಸಾಚಾರ ನಡೆಸುವುದು `ತೀವ್ರ ಪರಿಣಾಮಗಳಿಗೆ' ಕಾರಣವಾಗುತ್ತದೆ ಎಂದು ಅಮೆರಿಕದ ರಾಯಭಾರಿ ಮೈಕ್ ಹಕಬೀ ಶನಿವಾರ ಹೇಳಿದ್ದಾರೆ. 


ಇತ್ತೀಚೆಗೆ ಯಹೂದಿ ವಸಾಹತುಗಾರರ ದಾಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅವರು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಈ ಹೇಳಿಕೆ ನೀಡಿದ್ದಾರೆ.

ಈ ಸಮುದಾಯಗಳ ಜನರಿಗೆ ಭದ್ರತೆ ಮತ್ತು ಸುರಕ್ಷತೆಯಿಂದ ಜೀವಿಸುವ ಹಕ್ಕಿದೆ ಹಾಗೂ ಅದನ್ನು ಖಚಿತಪಡಿಸಿಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ನಾವು ತಲುಪಿಸುತ್ತಿದ್ದೇವೆ ಎಂದು ಹಕಬೀ ಹೇಳಿದರು.

ಇಸ್ರೇಲ್ 1967 ರಿಂದ ಪಶ್ಚಿಮ ದಂಡೆಯನ್ನು ತನ್ನ ವಶದಲ್ಲಿಟ್ಟುಕೊಂಡಿದೆ. ಫೆಲೆಸ್ತೀನಿಯನ್ ನಿವಾಸಿಗಳ ಮೇಲೆ ಇಸ್ರೇಲಿ ವಸಾಹತುಗಾರರ ಹಿಂಸಾಚಾರವು ವರ್ಷಗಳಿಂದ ನಡೆಯುತ್ತಿದ್ದು, ಯಾವುದೇ ಕಾನೂನು ಪರಿಣಾಮಗಳನ್ನು ಎದುರಿಸದೆ ಮುಂದುವರಿದಿದೆ.

ಜನರು ಇಂತಹ ಕೃತ್ಯ ಎಸಗಿದಾಗ, ಅವರು ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಅರಿವು ಅವರಿಗಿರಬೇಕು. ಇಂತಹ ಸಣ್ಣ ದಂಗೆಕೋರರ ಗುಂಪು ಇಡೀ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎಂಬಂತೆ ಬಿಂಬಿತವಾದರೆ ಸರಕಾರದ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಹಕಬೀ ಹೇಳಿರುವುದಾಗಿ ವರದಿಯಾಗಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries