HEALTH TIPS

ಪ್ರತಿ ನಾಲ್ಕು ಜನಧನ್‌ ಖಾತೆಗಳಲ್ಲಿ ಒಂದು ನಿಷ್ಕ್ರಿಯ: ಆರ್‌ಟಿಐ ಮಾಹಿತಿಯಿಂದ ಬಹಿರಂಗ

ಜೈಪುರ: ಪ್ರಧಾನಮಂತ್ರಿ ಜನಧನ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕು ಮಂದಿಯ ಬ್ಯಾಂಕ್ ಖಾತೆಗಳಲ್ಲಿ ಒಂದು ಖಾತೆಯು ನಿಷ್ಕ್ರಿಯವಾಗಿದೆ ಹಾಗೂ ಸುಮಾರು 5.72 ಕೋಟಿ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇರುವುದಾಗಿ ಆರ್‌ಟಿಐ ಉತ್ತರದಲ್ಲಿ ತಿಳಿಸಲಾಗಿದೆ. 


2026ರ ಆಗಸ್ಟ್ 12ರ ವೇಳೆಗೆ ಪ್ರಧಾನಮಂತ್ರಿ ಜನಧನ್‌ ಯೋಜನೆ (ಪಿಎಂಜೆಡಿವೈ)ಯಡಿ 59 ಕೋಟಿಗೂ ಅಧಿಕ ಖಾತೆಗಳಲ್ಲಿನ ಒಟ್ಟು ಸಂಯೋಜಿತ ಮೊತ್ತ 3.15 ಲಕ್ಷ ಕೋಟಿ ರೂ. ಆಗಿದೆ.

ದೇಶಾದ್ಯಂತ ಪ್ರಸಕ್ತ 59,03,74,907ಜನಧನ್‌ ಖಾತೆಗಳಿದ್ದು ಅವುಗಳ ಒಟ್ಟು ಬ್ಯಾಲೆನ್ಸ್ ಮೊತ್ತ ರೂ. 3,15,175.90 ರೂ. ಆಗಿದೆಯೆಂದು ಕೇಂದ್ರ ವಿತ್ತ ಸಚಿವಾಲಯದ ವಿತ್ತೀಯ ಸೇವೆಗಳ ಇಲಾಖೆಯು, ಚಂದ್ರಶೇಖ್ ಗೌರ್ ಎಂಬವರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ತಿಳಿಸಿದೆ.

ಒಟ್ಟು ಜನಧನ್‌ ಖಾತೆಗಳಲ್ಲಿ 32.89 ಕೋಟಿ ಖಾತೆಗಳನ್ನು ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಹೊಂದಿದ್ದರೆ, 26.14 ಕೋಟಿ ಖಾತೆಗಳನ್ನು ಪುರುಷರೇ ಹೊಂದಿದ್ದಾರೆ.

5,72,35,490 ಜನಧನ್‌ ಖಾತೆಗಳು ಶೂನ್ಯ ಬ್ಯಾಲೆನ್ಸ್ ಹೊಂದಿದ್ದರೆ, 15,36,77,009 ಖಾತೆಗಳನ್ನು ನಿಷ್ಕ್ರಿಯವಾಗಿವೆಯೆಂದು ವರ್ಗೀಕರಿಸಲಾಗಿದೆ.

ಉತ್ತರಪ್ರದೇಶದಲ್ಲಿ 95.92 ಲಕ್ಷ ಶೂನ್ಯಬಾಲೆನ್ಸ್ ಇರುವ ಜನಧನ್‌ ಖಾತೆಗಳಿದ್ದು, ಇದು ದೇಶದಲ್ಲೇ ಗರಿಷ್ಠವಾಗಿದೆ. ಬಿಹಾರ (62.35 ಲಕ್ಷ), ಪಶ್ಚಿಮಬಂಗಾಳ (37.20 ಲಕ್ಷ), ಅಸ್ಸಾಂ (36.30 ಲಕ್ಷ) ಹಾಗೂ ಮಹಾರಾಷ್ಟ್ರ (97.94 ಲಕ್ಷ), ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆ.

ಅತ್ಯಧಿಕ ಸಂಖ್ಯೆಯಲ್ಲಿ ನಿಷ್ಕ್ರಿಯವಾಗಿರುವ ಬ್ಯಾಂಕ್‌ಖಾತೆಗಳಿರುವ ಅಗ್ರ ಐದು ರಾಜ್ಯಗಳೆಂದರೆ, ಉತ್ತರಪ್ರದೇಶ (3.23 ಕೋಟಿ), ಬಿಹಾರ (ಬಿಹಾರ 1.59 ಕೋಟಿ), ಮಧ್ಯಪ್ರದೇಶ (1.35 ಕೋಟಿ), ಪಶ್ಚಿಮ ಬಂಗಾಳ (1.02 ಕೋಟಿ) ಹಾಗೂ ಮಹಾರಾಷ್ಟ್ರ (97.94 ಲಕ್ಷ).

ದೇಶದಲ್ಲೇ ಅತ್ಯಧಿಕ ಸಂಖ್ಯೆಯ ಜನಧನ್‌ ಖಾತೆಗಳಿರುವ ರಾಜ್ಯ ಕೂಡಾ ಉತ್ತರಪ್ರದೇಶವಾಗಿದ್ದು, ಅವುಗಳ ಸಂಖ್ಯೆ 10.51 ಕೋಟಿ ಆಗಿದೆ. ಬಿಹಾರ (7.01), ಪಶ್ಚಿಮ ಬಂಗಾಳ (5.73 ಕೋಟಿ), ರಾಜಸ್ಥಾನ (3.87 ಕೋಟಿ) ಹಾಗೂ ಮಹಾರಾಷ್ಟ್ರ 3.85 ಕೋಟಿ ಖಾತೆಗಳಿವೆ.

100 ರೂ.ಗಿಂತಲೂ ಕಡಿಮೆ ಬ್ಯಾಲೆನ್ಸ್ ಇರುವ ಖಾತೆಗಳು, ಕಳೆದ ಐದು ವರ್ಷಗಳಲ್ಲಿ ಮುಚ್ಚಲಾದ ಖಾತೆಗಳು ಹಾಗೂ ಶಂಕಾಸ್ದದ ಹಣ ವರ್ಗಾವಣೆ ಅಥವಾ ಸೈಬರ್‌ವಂಚನೆಯ ಕಾರಣದಿಂದಾಗಿ ಸ್ತಂಭನಗೊಳಿಸಲಾದ ಖಾತೆಗಳ ವಿವರಗಳನ್ನು ಕೇಂದ್ರ ಸರಕಾರದ ಮಟ್ಟದಲ್ಲಿ ಇರಸಿಲ್ಲವೆಂದು ಆರ್‌ಟಿಐ ಉತ್ದರದಲ್ಲಿ ತಿಳಿಸಲಾಗಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries