HEALTH TIPS

ಬಿಹಾರ | ಹಳಿ ತಪ್ಪಿದ ಮಹಾನಂದ ಎಕ್ಸ್‌ಪ್ರೆಸ್ ರೈಲು

ಪಾಟ್ನಾ: ಬಿಹಾರದ ಅರ್ರಾ ರೈಲು ನಿಲ್ದಾಣದಿಂದ ರವಿವಾರ ಬೆಳಗ್ಗೆ ಹೊರಟ ಕೆಲವೇ ನಿಮಿಷಗಳಲ್ಲಿ ಸಿಕ್ಕಿಂ ಮಹಾನಂದ ಎಕ್ಸ್‌ಪ್ರೆಸ್ ರೈಲಿನ ಎರಡು ಚಕ್ರಗಳು ಹಳಿ ತಪ್ಪಿದೆ. ಆದರೆ, ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. 


ದಿಲ್ಲಿ ಕಡೆಗೆ ಪ್ರಯಾಣಿಸುತ್ತಿದ್ದ ರೈಲು ಸಂಖ್ಯೆ 15483 ಬೆಳಗ್ಗೆ ಸುಮಾರು 4.10ಕ್ಕೆ ಫ್ಲಾಟ್‌ಫಾರ್ಮ್ ಸಂಖ್ಯೆ 2ರಿಂದ ಹೊರಟಿತು.

ಅದು ಪ್ಲಾಟ್‌ಫಾರ್ಮ್‌ನಿಂದ ಮುಂದೆ ಸಾಗುತ್ತಿದ್ದಂತೆ ಪ್ರಯಾಣಿಕರಿಗೆ ಭಾರಿ ಶಬ್ದ ಕೇಳಿಸಿತು ಮತ್ತು ಬಲವಾದ ಆಘಾತದ ಅನುಭವವಾಯಿತು.

ಈ ಸಂದರ್ಭ ಹಲವು ಪ್ರಯಾಣಿಕರು ನಿದ್ರೆಯಲ್ಲಿದ್ದರು. ಬೋಗಿಗಳಲ್ಲಿ ಕೆಲ ಕಾಲ ಆತಂಕ ಆವರಿಸಿತು. ನಂತರ ರೈಲಿನ ಎರಡು ಚಕ್ರಗಳು ಹಳಿಯಿಂದ ಕೆಳಗಿಳಿದಿರುವುದು ತಿಳಿದು ಬಂತು.

ರೈಲು ನಿಯಂತ್ರಿತ ವೇಗದಲ್ಲಿ ಚಲಿಸುತ್ತಿದ್ದುದು ದೊಡ್ಡ ಅಪಘಾತವನ್ನು ತಡೆಯಲು ಸಹಾಯ ಮಾಡಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ರೈಲು ಹಳಿ ತಪ್ಪಲು ಕಾರಣ ಏನು ಎಂಬುದು ತತ್‌ಕ್ಷಣ ತಿಳಿದು ಬಂದಿಲ್ಲ. ಹಳಿಯಲ್ಲಿನ ತಾಂತ್ರಿಕ ಸಮಸ್ಯೆ, ರೈಲು ಅಥವಾ ಇನ್ನು ಯಾವುದೇ ಕಾರಣದಿಂದ ಈ ಘಟನೆ ನಡೆದಿದೆಯೇ ಎಂಬುದನ್ನು ರೈಲ್ವೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries