ಬದಿಯಡ್ಕ: ಪೆರಡಾಲದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 76ನೇ ಜನ್ಮದಿನ ಹಾಗೂ ಆಡಳಿತದಲ್ಲಿ 25 ವರ್ಷ ಪೂರ್ತಿಗೊಳಿಸಿದ ಸಂಭ್ರಮ ಆಚರಣೆಯನ್ನು ಸೇವಾ ಸಂಕಲ್ಪ ಅಭಿಯಾನದ ಮೂಲಕ ವಿವಿಧ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಯಿತು. 1969 ರಿಂದ 2002 ರ ವರೆಗೆ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕಿಯಾಗಿ ನಿವೃತ್ತಿ ಹೊಂದಿದ ಎನ್ ಎಚ್ ಎಸ್ ರಸ್ತೆಯ ಸುಮಿತ್ರ ಟೀಚರ್ ಅವರನ್ನು ಗೌರವಿಸಲಾಯಿತು. ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೀಚರ್ ದೀಪ ಬೆಳಗಿಸುವ ಮೂಲಕ ಪ್ರಧಾನಮಂತ್ರಿಗೆ ಶುಭ ಹಾರೈಸಿದರು. ಜೊತೆಗೆ ಶಾಸ್ತ್ರೀಸ್ ಕಾಂಪೌಂಡ್ ಬಳಿ ಹಿರಿಯ ವ್ಯಕ್ತಿ, ಕೇಂದ್ರ ಸರ್ಕಾರದ ಫಲಾನುಭವಿ ವೇದಾವತಿ ಅವರನ್ನು ಗೌರವಿಸಲಾಯಿತು. ಅಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಾವತಿ ಅವರು ದೀಪ ಬೆಳಗಿಸಿದರು. ಸ್ವ ಉದ್ಯೋಗದ ಮೂಲಕ ಮನೆಯಲ್ಲೇ ಹೋಟೆಲ್ ನಡೆಸುತ್ತಿರುವ ಕುಮಾರ ಹಾಗೂ ಸುಜಾತ ದಂಪತಿಗಳನ್ನು ಗೌರವಿಸಲಾಯಿತು. ದಂಪತಿಗಳು ದೀಪ ಪ್ರಜ್ವಲಿಸುವ ಮೂಲಕ ಪ್ರಧಾನಿಗೆ ಶುಭಕೋರಿದರು. ಅಂತಿಮವಾಗಿ ರಾಘವೇಂದ್ರ ಅವರ ಮನೆಯಲ್ಲಿ ಸ್ವಪ್ನ ರಾಘವೇಂದ್ರ ಅವರು ದೀಪ ಬೆಳಗಿಸಿ ಶುಭಕೋರಿದರು.
ವಾರ್ಡ್ ಸಮಿತಿ ಅಧ್ಯಕ್ಷ ನಾರಾಯಣ ಭಟ್ ಮೈರ್ಕಳ, ಬಿಜೆಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ, ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆಯಂ ನರೇಂದ್ರ ಮೋದಿಯವರ ಆಡಳಿತದ ಬೆಳವಣಿಗೆಯ ಬಗ್ಗೆ ವಿವರಿಸಿದರು. ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಉದನೇಶ್ವರ ಬಿ, ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಕಾರ್ಯಕರ್ತರಾದ ಪುಂಡಲಿಕ ಆಚಾರ್ಯ, ಜಯರಾಮ, ಪ್ರಶಾಂತಿ, ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ವಾರ್ಡ್ ಕಾರ್ಯದರ್ಶಿ ಹರಿಣಾಕ್ಷಿ ಸತೀಶ್ ಸ್ವಾಗತಿಸಿ, ಉಪಾಧ್ಯಕ್ಷೆ ಪ್ರಫುಲ್ಲ ವಂದಿಸಿದರು. ವಾರ್ಡ್ ಪ್ರಧಾನ ಕಾರ್ಯದರ್ಶಿ ನಾರಾಯಣ.ಪಿ ಪೆರಡಾಲ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
