ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿನ ಬೀದಿ ದೀಪ ದುರಸ್ತಿ ಕಾರ್ಯದಮಧ್ಯೆ ಹೈಡ್ರಾಲಿಕ್ ಲಿಫ್ಟ್ನಲ್ಲಿಕಾಣಿಸಿಕೊಂಡ ತಕರಾರಿನಿಂದ ಇಬ್ಬರು ಕಾರ್ಮಿಕರು ತಾಸುಗಳ ಕಾಳ ಲಿಫ್ಟ್ನಲ್ಲಿ ಸಿಲುಕಿಕೊಂಡಿದ್ದಾರೆ. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಸುಮಾರು 13 ಮೀಟರ್ ಎತ್ತರದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ರಕ್ಷಿಸಿದ್ದಾರೆ.
ಲಿಫ್ಟ್ ದೋಷದಿಂದ ಸಿಲುಕಿಕೊಂಡ ಕಾರ್ಮಿಕರಾದ ಅಶೋಕ್ (50) ಮತ್ತು ಶಿವಪ್ರಸಾದ್ (40) ಅವರನ್ನು ನಂತರ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಬೀದಿ ದೀಪ ದುರಸ್ತಿ ಮಧ್ಯೆ ತಿಂಗಳುಗಳ ಹಿಂದೆ ಲಿಫ್ಟ್ ತುಂಡಾಗಿ ಬಿದ್ದು ಒಬ್ಬರು ಸಾವಿಗೀಡಾದ ಘಟನೆಯೂ ನಡೆದಿತ್ತು.

