ಕುಂಬಳೆ: ಅನಧಿಕೃತವಾಗಿ ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ಕುಂಬಳೆ ನಾಯ್ಕಾಪಿನಿಂದ ವಶಪಡಿಸಿಕೊಂಡಿರುವ ಪೊಲೀಸರು, ಚಾಲಕ ಕೋಯಿಕ್ಕೋಡು ಕರಿಪ್ಪೋಡ್ ನಿವಾಸಿ ಕೃಷ್ಣದಾಸ್ ಎಂಬಾತನನ್ನು ಬಂಧಿಸಿದ್ದಾರೆ.
ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಿಂದ ಮಣ್ಣು ಹಾಗೂ ಕೆಂಪು ಕಲ್ಲುಗಳನ್ನು ಇತರ ಜಿಲ್ಲೆ ಹಾಗೂ ರಾಜ್ಯಗಳಿಗೆ ವ್ಯಾಪಕವಾಗಿ ಸಾಗಿಸಲಾಗುತ್ತಿರುವ ಬಗ್ಗೆ ದೂರುಲಭಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದರು. ಕುಂಬಳೆ ಪೋಲೀಸ್ ಠಾಣೆ ಇನ್ಸ್‍ಪೆಕ್ಟರ್ ಅನೂಪ್ ಕೆ.ಎಸ್, ಎಸ್.ಐ ಕೆ.ಪಿ. ಗಣೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.


