HEALTH TIPS

ಬಾಯಾರಿನಲ್ಲಿ ಸಹೋದರರಿಂದ ಗಣಪತಿ ವಿಗ್ರಹ ರಚನೆ

ಉಪ್ಪಳ: ಗಣೇಶೋತ್ಸವ ಸಮೀಪಿಸಿರುವಂತೆ ಬಾಯಾರುನಲ್ಲಿ ಗಣಪತಿ ವಿಗ್ರಹ ರಚನೆ ಭರದಿಂದ ನಡೆಯುತ್ತಿದೆ. ಸೆ. 14 ರಂದು ಶ್ರೀ ಗಣೇಶೋತ್ಸವ ನಡೆಯಲಿದೆ. ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಳಿಯ ನಿವಾಸಿ ದಿ. ಕೃಷ್ಣಪ್ಪ ಆಚಾರ್ಯರ ಮಕ್ಕಳಾದ ಮಹೇಶ ಹಾಗೂ ಭರತ್ ಸಹೋದರರು ಮನೆಯಲ್ಲಿ ಗಣಪತಿ ವಿಗ್ರಹ ತಯಾರಿಸುತ್ತಿದ್ದಾರೆ. ಈ ವರ್ಷ ಒಟ್ಟು 50 ಗಣಪತಿ ವಿಗ್ರಹ ಸಿದ್ದವಾಗುತ್ತಿದೆ. ಬಾಯಾರು, ಜೋಡುಕಲ್ಲು, ಪ್ರತಾಪನಗರ, ಹೊಸಂಗಡಿ, ಮಿತ್ತನಡ್ಕ, ಸುಂಕದಕಟ್ಟೆ, ನೀಲೇಶ್ವರ, ಕರ್ನಾಟಕದ ಬೆಂಗಳೂರು, ಮಡಿಕೇರಿ ಸಹಿತ ವಿವಿಧ ಕಡೆಗಳಲ್ಲಿ ಪೂಜಿಸುವ ಗಣಪತಿ ವಿಗ್ರಹ ಸಿದ್ದಗೊಳ್ಳುತ್ತಿದೆ. ಸಾರ್ವಜನಿಕ ಹಾಗೂ ಮನೆಗಳಲ್ಲಿ ಪೂಜಿಸುತ್ತಿರುವ ಗಣಪತಿ ವಿಗ್ರಹ ಒಳಗೊಂಡಿದೆ. ಕಳೆದ 40 ವರ್ಷಗಳಿಂದ ವಿಗ್ರಹ ರಚನೆಯಲ್ಲಿ ತೊಡಗಿದ್ದಾರೆ. ಕಾಸರಗೋಡಿನ ಲಕ್ಷ್ಮೀಶ ಆಚಾರ್ಯರಿಂದ ಗಣಪತಿ ವಿಗ್ರಹ ಸಹಿತ ಚಿತ್ರ ರಚನೆಯನ್ನು ಮಹೇಶ ಕಲಿತಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries