HEALTH TIPS

ಚಂದ್ರಶೇಖರನ್‌ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್‌

ನವದೆಹಲಿ (PTI): ಎನ್. ಚಂದ್ರಶೇಖರನ್ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೆ ಮರುನೇಮಕ ಮಾಡುವ ಟಾಟಾ ಸನ್ಸ್‌ ಆಡಳಿತ ಮಂಡಳಿಯ ನಿರ್ಣಯವನ್ನು ಟಾಟಾ ಟ್ರಸ್ಟ್ಸ್‌ ಪ್ರಶ್ನಿಸಿದೆ. 


ಚಂದ್ರಶೇಖರನ್ ಅವರನ್ನು ಇನ್ನೊಂದು ಅವಧಿಗೆ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಟಾಟಾ ಸನ್ಸ್‌ನ ಆಡಳಿತ ಮಂಡಳಿಯ ನಿರ್ದೇಶಕರು ಕಳೆದ ವಾರ ನಿರ್ಣಯ ಕೈಗೊಂಡಿದ್ದಾರೆ. 

ಆದರೆ ಟಾಟಾ ಟ್ರಸ್ಟ್ಸ್‌ನ ಅಧ್ಯಕ್ಷ ನೋಯಲ್ ಟಾಟಾ ಮಾತ್ರ ನೇಮಕದ ವಿರುದ್ಧ ಮತ ಚಲಾಯಿಸಿದ್ದಾರೆ. ಟಾಟಾ ಟ್ರಸ್ಟ್ಸ್‌ನಿಂದ ನಾಮನಿರ್ದೇಶನದ ಮೂಲಕ ನೇಮಕ ಆಗಿರುವ ಇನ್ನೊಬ್ಬ ನಿರ್ದೇಶಕ ವೇಣು ಶ್ರೀನಿವಾಸನ್ ಅವರು ಮರುನೇಮಕದ ಪರವಾಗಿ ಮತ ಚಲಾಯಿಸಿದ್ದಾರೆ.

'ಟಾಟಾ ಸನ್ಸ್‌ನ ಆಡಳಿತ ಮಂಡಳಿಯಲ್ಲಿ ಟಾಟಾ ಟ್ರಸ್ಟ್ಸ್‌ನ ಇಬ್ಬರು ನಾಮನಿರ್ದೇಶಿತ ಸದಸ್ಯರು ಇದ್ದಾರೆ. ಇವರಿಬ್ಬರ ಪೈಕಿ ಒಬ್ಬರು ಇನ್ನೊಂದು ಅವಧಿ ನೀಡುವ ತೀರ್ಮಾನದ ವಿರುದ್ಧ ಮತ ಚಲಾಯಿಸಿದ್ದಾರೆ. ಹೀಗಾಗಿ, ನಿರ್ಣಯದ ಪರವಾಗಿ ನಾಮನಿರ್ದೇಶಿತ ಸದಸ್ಯರಿಂದ ಬಹುಮತ ಸಿಕ್ಕಿಲ್ಲ. ಇದರಿಂದಾಗಿ ನಿರ್ಣಯಕ್ಕೂ ಸೋಲಾಗಿದೆ' ಎಂದು ಟ್ರಸ್ಟ್ಸ್‌ ಹೇಳಿದೆ.

ಟಾಟಾ ಸನ್ಸ್‌ ಕಂಪನಿಯನ್ನು ಷೇರುಪೇಟೆಯಲ್ಲಿ ನೋಂದಾಯಿಸುವ ವಿಚಾರವನ್ನು ಕೂಡ ಟಾಟಾ ಟ್ರಸ್ಟ್ಸ್‌ ವಿರೋಧಿಸಿದೆ. ಆಡಳಿತವನ್ನು ಸುಧಾರಿಸಬೇಕು ಎಂದಾದರೆ ಕಂಪನಿಯು ಷೇರುಪೇಟೆಯಲ್ಲಿ ನೋಂದಾಯಿತ ಆಗಬೇಕು ಎಂಬ ವಾದವನ್ನು ಅದು ಒಪ್ಪಿಲ್ಲ.

'ಟಾಟಾ ಸನ್ಸ್‌ ಕಂಪನಿಯು ವರ್ಷಗಳಿಂದಲೂ ಷೇರುಪೇಟೆ ನೋಂದಾಯಿತ ಕಂಪನಿಯೊಂದು ಪಾಲಿಸಬಹುದಾದ ಮಾನದಂಡಗಳನ್ನು ಪಾಲಿಸುತ್ತ ಬಂದಿದೆ' ಎಂದು ಟಾಟಾ ಟ್ರಸ್ಟ್ಸ್‌ ಹೇಳಿದೆ. ಪಾರದರ್ಶಕತೆ ಹಾಗೂ ಉತ್ತಮ ಆಡಳಿತದ ದೃಷ್ಟಿಯಿಂದ ಇವನ್ನೆಲ್ಲ ಸ್ವಇಚ್ಛೆಯಿಂದ ಮಾಡಲಾಗಿದೆ' ಎಂದು ಅದು ವಿವರಿಸಿದೆ.

ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಷೇರುಪೇಟೆ ನೋಂದಾಯಿತ ಆಗಬೇಕು ಎಂಬ ವಾದಕ್ಕೆ ಪ್ರತಿಯಾಗಿ ಟ್ರಸ್ಟ್ಸ್‌, ಇದರಿಂದ 'ಕಲ್ಪಿತ ಲೋಪವೊಂದನ್ನು ಸರಿಪಡಿಸಲು ಶತಮಾನದಷ್ಟು ಹಳೆಯದಾದ ವ್ಯವಸ್ಥೆಯನ್ನು ಕೆಡವಿದಂತೆ' ಆಗುತ್ತದೆ ಎಂದು ಹೇಳಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries