HEALTH TIPS

'ಕಾಸರಗೋಡನ್ನು ತಿಳಿದುಕೊಳ್ಳಿ': ಜಿಲ್ಲಾಡಳಿತದ ಅಭಿಯಾನ ಪ್ರಾರಂಭ

ಕಾಸರಗೋಡು: ಜಿಲ್ಲಾ ಆಡಳಿತವು ಕಾಸರಗೋಡು ಜಿಲ್ಲೆಯ ಇತಿಹಾಸ, ಸಂಸ್ಕøತಿ, ಹಬ್ಬಗಳು, ವಿಶಿಷ್ಟ ಕಲಾ ಪ್ರಕಾರಗಳು, ಪ್ರವಾಸೋದ್ಯಮ ಕೇಂದ್ರಗಳು ಮತ್ತು ಪಾಕಪದ್ಧತಿಗಳನ್ನು ತಿಳಿದುಕೊಳ್ಳಲು ಅಭಿಯಾನವನ್ನು ಪ್ರಾರಂಭಿಸಿದೆ. 


ಜಿಲ್ಲೆಯ ವೈವಿಧ್ಯತೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸುವುದು ಮತ್ತು ಜಿಲ್ಲೆಯ ಹೊರಗಿನ ಜನರು ಕಾಸರಗೋಡಿನ ವಿಶೇಷತೆಗಳನ್ನು ತಿಳಿದುಕೊಳ್ಳಲು ಮತ್ತು ಆನಂದಿಸಲು ಪೆÇ್ರೀತ್ಸಾಹಿಸುವುದು ಇದರ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀಧನ್ಯ ಸುರೇಶ್ ಹೇಳಿದರು. ಇದರ ಭಾಗವಾಗಿ, ವಾರದಲ್ಲಿ ಎರಡು ದಿನ, ಜಿಲ್ಲೆಯ ಯಾವುದೇ ವಿಶೇಷತೆಯನ್ನು ಜಿಲ್ಲಾಧಿಕಾರಿಗಳ ಅಧಿಕೃತ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್ ಪುಟಗಳ ಮೂಲಕ ಮಲಯಾಳಂ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪರಿಚಯಿಸಲಾಗುವುದು. ಸಾರ್ವಜನಿಕರು ಕಾಮೆಂಟ್‍ಗಳ ಮೂಲಕ ಮತ್ತು ಸಲಹೆಗಳನ್ನು ನೀಡುವ ಮೂಲಕ ಕಾಸರಗೋಡಿನ ವಿಶೇಷತೆಗಳನ್ನು ಸಾರ್ವಜನಿಕರ ಗಮನಕ್ಕೆ ತರುವ ಅವಕಾಶವಿರುತ್ತದೆ.

ಜಿಐ ಟ್ಯಾಗ್ ಪಡೆದ ಜಿಲ್ಲೆಯ ವಿಶಿಷ್ಟ ಕೈಮಗ್ಗ ಉತ್ಪನ್ನವಾದ ಕಾಸರಗೋಡು ಸೀರೆಯನ್ನು ಪರಿಚಯಿಸುವ ಮೂಲಕ ಜಿಲ್ಲಾಧಿಕಾರಿ ಶ್ರೀಧನ್ಯ ಸುರೇಶ್ ಅಧಿಕೃತವಾಗಿ ಅಭಿಯಾನವನ್ನು ಉದ್ಘಾಟಿಸಿದರು. ಡಿಟಿಪಿಸಿ ಮತ್ತು ಐ & ಪಿಆರ್‍ಡಿ ಸಹಯೋಗದೊಂದಿಗೆ ಜಿಲ್ಲಾಡಳಿತದ ನೇತೃತ್ವದಲ್ಲಿ ಅಭಿಯಾನವನ್ನು ಆಯೋಜಿಸಲಾಗುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries