HEALTH TIPS

ನಿಸರ್ಗದ ರೋದನಕ್ಕೆ ರಾಜಕೀಯ ನಾಯಕರ ಕಿವುಡು: ನೇಪಾಳ ಪ್ರಧಾನಿ ಬಾಲೇಂದ್ರ ಶಾ

ವಿಶ್ವಸಂಸ್ಥೆ: ನೇಪಾಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ ಎನ್ನುವ ಕುರಿತು ವಿಜ್ಞಾನಿಗಳು ಸೇರಿದಂತೆ ಹಲವರು ಎಚ್ಚರಿಕೆಗಳನ್ನು ನೀಡಿದ್ದರು. ಆದರೆ, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ರಾಜಕೀಯ ನಾಯಕರಾದ ನಾವು ನಿರ್ಲಕ್ಷ ಮಾಡಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ಅಲ್ಲಿನ ಪ್ರಧಾನಿ ಬಾಲೇಂದ್ರ ಶಾ ಹೇಳಿದ್ದಾರೆ.  


ಪ್ರಧಾನ ಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಬಾಲೇಂದ್ರ ಶಾ, 'ನೇಪಾಳದ ಪ್ರವಾಹದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದಾರೆ. ಇನ್ನೂ ಹಲವರು ಕಾಣೆಯಾಗಿದ್ದಾರೆ. ಈ ರೀತಿಯ ಹವಾಮಾನ ವೈಪರೀತ್ಯದ ವಿರುದ್ಧ ಹೋರಾಡಲು ಜಗತ್ತು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಕರೆ ನೀಡಿದ್ದಾರೆ.

'ನಾನು ಇಲ್ಲಿ ನಿಂತು ಅಭಿವೃದ್ಧಿ, ಪ್ರಜಾಪ್ರಭುತ್ವ, ಶಾಂತಿ ಮತ್ತು ಯುವ ರಾಷ್ಟ್ರದ ಆಶೋತ್ತರಗಳ ಬಗ್ಗೆ ಸರಳವಾಗಿ ಮಾತನಾಡಲು ಬಯಸಿದ್ದೆ. ಆದರೆ, ಇದೀಗ ಸಾವು-ನೋವು ಮತ್ತು ವಿನಾಶದ ಬಗ್ಗೆ, ಎಂದಿಗೂ ಮನೆಗೆ ಮರಳದ ಪ್ರೀತಿಪಾತ್ರರಿಗಾಗಿ ಕಾಯುತ್ತಿರುವ ಕುಟುಂಬಗಳ ಬಗ್ಗೆ, ಸಿಗದ ಮೃತದೇಹಗಳಿಗಾಗಿ ಕೆಸರು, ಬಂಡೆ ಮತ್ತು ನೀರಿನಲ್ಲಿ ಹುಡುಕಾಡುತ್ತಿರುವ ಜನರ ಬಗ್ಗೆ ಮಾತನಾಡಬೇಕಾಗಿದೆ' ಎಂದು ಭಾವುಕರಾಗಿ ಹೇಳಿದ್ದಾರೆ.

ಇದೇ ವೇಳೆ ನೇಪಾಳ, ಭಾರತ ಮತ್ತು ಚೀನಾ ನೇತೃತ್ವದಲ್ಲಿ 'ಹಿಮಾಲಯ ಹವಾಮಾನ ಸ್ಥಿತಿಸ್ಥಾಪಕತ್ವ ವ್ಯವಸ್ಥೆ'ಯ ಸ್ಥಾಪನೆ ಮಾಡುವ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81 ನೇ ಅಧಿವೇಶನದಲ್ಲಿ ಬಾಲೇಂದ್ರ ಶಾ ಪ್ರಸ್ತಾಪಿಸಿದ್ದಾರೆ.

ಹಿಮಾಲಯದಲ್ಲಿ ಹಿಮ ಕರಗುವಿಕೆ, ಪ್ರವಾಹ, ಭೂಕುಸಿತಗಳಿಂದ ಅಪಾಯಗಳು ಹೆಚ್ಚಾಗುತ್ತಿವೆ. ಇದರ ಪರಿಣಾಮವು ನೇಪಾಳ, ಚೀನಾ ಮತ್ತು ಭಾರತದ ಮೇಲಾಗುತ್ತಿದೆ. ಹವಾಮಾನ ವೈಪರೀತ್ಯಗಳು ಗಡಿಯನ್ನು ನೋಡಿ ಸಂಭವಿಸುವುದಿಲ್ಲ. ಹಾಗಾಗಿ, ಈ ವ್ಯವಸ್ಥೆಯ ಮೂಲಕ ಉಪಗ್ರಹ ಮಾಹಿತಿಗಳನ್ನು ಹಂಚಿಕೊಂಡು, ಪ್ರವಾಹಗಳ ಕುರಿತ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸೋಣ. ವಿಕೋಪಗಳು ಸಂಭವಿಸಿದಾಗ ಗಡಿಗಳನ್ನು ಮೀರಿದ ಅಂತರರಾಷ್ಟ್ರೀಯ ಸಹಕಾರ ಮತ್ತು ಸಹಾಯಕ್ಕೆ ಇದು ನೆರವಾಗಲಿದೆ ಎಂದು ಹೇಳಿದ್ದಾರೆ.

ಹಠಾತ್ ಪ್ರವಾಹದ ವೇಳೆ ನಮ್ಮ ನೆರೆಹೊರೆಯ ದೇಶಗಳಾದ ಭಾರತ ಮತ್ತು ಚೀನಾ ತಕ್ಷಣ ಸಹಾಯವನ್ನು ಮಾಡಿದವು. ಇತರ ಮಿತ್ರ ದೇಶಗಳು, ವಿಶ್ವಸಂಸ್ಥೆ, ಮಾನವೀಯ ಸಂಸ್ಥೆಗಳು ಮತ್ತು ಪ್ರಪಂಚದಾದ್ಯಂತದ ಜನರು ನೇಪಾಳದ ಪರವಾಗಿ ನಿಂತರು. ನೆರವಿಗೆ ಬಂದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ನೇಪಾಳ ಪ್ರವಾಹದಲ್ಲಿ ಹಲವು ನಗರ ಮತ್ತು ಹಳ್ಳಿಗಳು ನಾಶವಾಗಿವೆ. 1,452 ಜನರು ಮೃತಪಟ್ಟಿದ್ದು, 6 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries