HEALTH TIPS

'ಟೋಟಲೈಸರ್‌' ಬಳಕೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ 'ಸುಪ್ರೀಂ'

ನವದೆಹಲಿ: ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ(ಇವಿಎಂ) ದಾಖಲಾಗಿರುವ ಮತಗಳ ಎಣಿಕೆಗೆ 'ಟೋಟಲೈಸರ್‌'ಗಳ ಬಳಕೆಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಕುರಿತು ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠವು, 'ಟೋಟಲೈಸರ್‌ಗಳ ಬಳಕೆಗೆ ಚುನಾವಣಾ ನೀತಿಯಲ್ಲಿ ತಿದ್ದುಪಡಿ ತರುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸಬೇಕು. ಅದಕ್ಕಿರುವ ಅಡೆತಡೆಗಳು ಯಾವುವು? 'ಟೋಟಲೈಸರ್‌' ಬಳಕೆಯಿಂದಾಗುವ ಅಡ್ಡಪರಿಣಾಮಗಳು ಏನು? ಎನ್ನುವುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ' ಎಂದು ತಿಳಿಸಿದೆ.

'ಟೋಟಲೈಸರ್‌' ಮತ ಎಣಿಕೆ ಸಾಧನವಾಗಿದ್ದು, ಇದರಿಂದ 14 ಮತಗಟ್ಟೆಗಳ ಮತಗಳನ್ನು ಏಕಕಾಲದಲ್ಲಿ ಎಣಿಸಬಹುದು.

'ಟೋಟಲೈಸರ್‌ ಬಳಕೆಗೆ ಹಲವು ಅಡೆತಡೆಗಳಿವೆ ಮತ್ತು ಹಲವಾರು ರಾಜಕೀಯ ಪಕ್ಷಗಳು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ' ಎಂದು ಚುನಾವಣಾ ಆಯೋಗದ ಪರ ವಕೀಲರು ನ್ಯಾಯಲಯಕ್ಕೆ ತಿಳಿಸಿದರು.

ಮತಗಳ ಎಣಿಕೆಗೆ 'ಟೋಟಲೈಸರ್‌'ಗಳನ್ನು ಬಳಸಲು ನಿರ್ದೇಶನ ನೀಡುವಂತೆ ಕೋರಿ ವಕೀಲರಾದ ಅಶ್ವಿನಿ ಉಪಾಧ್ಯಾಯ, ಯೋಗೇಶ್‌ ಗುಪ್ತಾ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries