HEALTH TIPS

ಉಕ್ರೇನ್‌ ವಿರುದ್ಧ ಯುದ್ಧ ತಕ್ಷಣವೇ ನಿಲ್ಲಿಸಿ: ಪುಟಿನ್‌ಗೆ ಮೋದಿ ಆಗ್ರಹ

ಬಿಷ್ಕೆಕ್‌: 'ಉಕ್ರೇನ್‌-ರಷ್ಯಾ ಯುದ್ಧವನ್ನು ತಕ್ಷಣವೇ ನಿಲ್ಲಿಸಿ. ಗಾಂಧಿ ಮತ್ತು ಬುದ್ಧನ ನಾಡಾಗಿರುವ ಭಾರತವು ಶಾಂತಿ ಸ್ಥಾಪಿಸುವ ಎಲ್ಲ ಪ್ರಯತ್ನವನ್ನು ಸದಾ ಬೆಂಬಲಿಸುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರನ್ನು ಆಗ್ರಹಿಸಿದರು.


'ಯುದ್ಧ ಅಂತ್ಯಗೊಳಿಸಿ ಎನ್ನುವುದೇ ಭಾರತದ ಸಂದೇಶ' ಎಂದರು. ಕಿರ್ಗಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆ ವೇಳೆ ಈ ಇಬ್ಬರು ನಾಯಕರು ಸೋಮವಾರ ಮಾತುಕತೆ ನಡೆಸಿದರು.

'ಪ್ರತಿದಿನದ ಯುದ್ಧವು ಮಾನವತೆಯನ್ನು ನಮ್ಮಿಂದ ದೂರಕ್ಕೆ ತಳ್ಳುತ್ತದೆ. ಯುದ್ಧವೇ ಕೊನೆಗೊಳ್ಳದ ಸ್ಥಿತಿಯಿಂದ ಯುದ್ಧವನ್ನು ಅಂತ್ಯಗೊಳಿಸುವ ಸ್ಥಿತಿಗೆ ನೀವು ಬರಬೇಕು' ಎಂದೂ ಪ್ರಧಾನಿ ಮೋದಿ ಅವರು ಪುಟಿನ್‌ ಅವರನ್ನು ಒತ್ತಾಯಿಸಿದರು.

'ನಾವು ಉಕ್ರೇನ್‌ ವಿಚಾರವನ್ನು ಮಾತನಾಡುತ್ತಲೇ ಇದ್ದೇವೆ. ಹಿಂದೆ ಭೇಟಿಯಾದಾಗಲೂ ಮಾತನಾಡಿದ್ದೇವೆ. ಆ ವೇಳೆ ನೀವು ಈ ವಿಚಾರದಲ್ಲಿನ ಎಲ್ಲ ಆಯಾಮಗಳ ಬಗ್ಗೆ ನನಗೆ ವಿವರಿಸಿದ್ದೀರಿ. ನಾವಿಬ್ಬರೂ ಈ ಬಗ್ಗೆ ಚರ್ಚಿಸಿದ್ದೇವೆ. ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ ಎಂದಿಗೂ ಇದೆ' ಎಂದರು.

ಮುಂದಿನ ವಾರ ಪುಟಿನ್‌ ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಲಿದ್ದಾರೆ. ಈ ಮಧ್ಯೆಯೇ ಈ ಮಾತುಕತೆ ನಡೆದಿದೆ. ಪುಟಿನ್‌ ಅವರು ಕಳೆದ ವರ್ಷ ಭಾರತಕ್ಕೆ ಭೇಟಿ ನೀಡದ್ದನ್ನು ಮಾತುಕತೆ ವೇಳೆ ಪ್ರಧಾನಿ ಮೋದಿ ಅವರು ಪ್ರಸ್ತಾಪಿಸಿದರು.

'ನೀವು ಕಳೆದ ವರ್ಷ ಭಾರತಕ್ಕೆ ಬಂದಿದ್ದಿರಿ. ಆಗ ನಮ್ಮ ಭೇಟಿಯು ಯಶಸ್ವಿಯಾಗಿತ್ತು. ಅದೊಂದು ಸದಾ ನೆನಪಿನಲ್ಲಿ ಇರುವ ಭೇಟಿಯಾಗಿತ್ತು' ಎಂದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries