ಕಾಸರಗೋಡು: ಭಾರತ ಸರ್ಕಾರದ ಸಂಸ್ಕøತಿ ಸಚಿವಾಲಯ ಮತ್ತು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಇವರು ಕೇರಳದ ಕೊಚ್ಚಿಯ ಜನ್ಮಭೂಮಿ ಪತ್ರಿಕೆಯ ಸಹಯೋಗದಲ್ಲಿ ಒಂದು ಮಹಾಕಾವ್ಯ-ಹಲವು ಕಥೆಗಳು-ಭಾರತ ಮತ್ತು ಅದರಾಚೆಗೆ 'ರಾಮಕಥಾ'ಎಂಬ ಶೀರ್ಷಿಕೆಯಲ್ಲಿ ಎರಡು ದಿನಗಳ ಮಹಾ ಸಮ್ಮೇಳನ ಸೆ. 18 ಮತ್ತು 19 ರಂದು ಎರ್ನಾಕುಳಂನ ಬಾಸ್ಕರೀಯಂ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಸೆ. 18ರಂದು ಸಂಜೆ 5ರಿಂದ ಕಾಸರಗೋಡು ಸುಬ್ರಾಯ ಪಂಡಿತ ವಿರಚಿತ ರಾವಣವಧೆ ಕಥಾಭಾಗದ ಕನ್ನಡ ಯಕ್ಷಗಾನ (ತೆಂಕು ತಿಟ್ಟು )ವನ್ನು ಯಕ್ಷಗುರು ಶಿವಶಂಕರ ದಿವಾಣರ ನೇತೃತ್ವದ ಸ್ಟಸ್ತಿ ಶ್ರೀ ತಂಡವು ಪ್ರಸ್ತುತ ಪಡಿಸಲಿದೆ. ತಂಡದಲ್ಲಿ ಭಾಗವತರಾಗಿ ಸತೀಶ್ ಪುಣಿಂಚಿತ್ತಾಯ, ಚೆಂಡೆ ಮತ್ತು ಮದ್ದಳೆ ವಾದಕರಾಗಿ ರಾಜೇಂದ್ರ ಪ್ರಸಾದ್ ಪುಂಡಿಕಾಯಿ ಶ್ರೀಸ್ಕಂದ ದಿವಾಣ, ಪಾತ್ರದಾರಿಗಳಾಗಿ ಶಿವಶಂಕರ ದಿವಾಣ, ವೇಣುಗೋಪಾಲ ಶೇಣಿ, ಪ್ರಶಾಂತ ಶೆಟ್ಟಿ ನೆಲ್ಯಾಡಿ, ರಾಮಚಂದ್ರ ಹೊಳ್ಳ ಕುಳ, ಮನೀಶ್ ಪಾಟಾಳಿ ಎಡನೀರು, ಓಂ ಪ್ರಕಾಶ ಬದಿಯಡ್ಕ, ಶೇಖರ ಜಯನಗರ, ಜಗದೀಶ ಬದಿಯಡ್ಕ, ರಘುರಾಮ ಮಣಿಯಾಣಿ ಆದೂರು ಮೊದಲಾದ ಕಲಾವಿದರು ಪಾಲ್ಗೊಳ್ಳುವರು.

