ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಮಾದಕವಸ್ತು ವಶಪಡಿಸಿಕೊಂಡಿರುವ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪೆರುಂಬಳ ಚಟ್ಟಂಚಾಲ್‍ನ ಮೊಹಮ್ಮದ್ ಫೈಸಲ್ ಅಲಿಯಾಸ್ ಫೈಸಲ್ (34) ಹಾಗೂ ವಿಜಯ ಕ್ವಾರ್ಟರ್ಸ್‍ನ ಯಾಸೀರ್ ಅವರ ಪತ್ನಿ ತಸ್ಲಿಂ ಫರ್ಸಾನ (24) ಬಂಧಿತರು. ಇವರ ವಶದಲ್ಲಿದ್ದ ಒಂದು ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಚೆರ್ಕಳದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನೇತೃತ್ವ ನೀಡುವ 'ಡ್ಯಾನ್ಸಾಫ್' ತಂಡ ಹಾಗೂ ವಿದ್ಯಾನಗರ ಪೆÇಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಜೋಡಿ ಕಾಸರಗೋಡು ಕಡೆಯಿಂದ ಚಟ್ಟಂಚಾಲ್‍ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಕಾರ್ಯಚರಣೆ ನಡೆಸಲಾಗಿದೆ. ಜೋಡಿ ಸಂಚಾರಕಕೆ ಬಳಸಿದ್ದ ಕಾರು, ಮಾದಕವಸ್ತು ಹಾಗೂ ಮೂರು ಮೊಬೈಲ್ ಪೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.


