HEALTH TIPS

'ಯುಪಿಐ ರಹಿತ ದಿನ': ವರದಿ ಅಲ್ಲಗಳೆದ ಸಿಎಐಟಿ

ನವದೆಹಲಿ (PTI): ಅಕ್ಟೋಬರ್‌ 2ರಂದು ದೇಶದಾದ್ಯಂತ 'ಯುಪಿಐ ರಹಿತ ದಿನ' ಆಚರಿಸಲು ಕರೆ ನೀಡಲಾಗಿದೆ ಎಂಬ ವರದಿಯನ್ನು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಶುಕ್ರವಾರ ಅಲ್ಲಗಳೆದಿದ್ದು, ಇಂತಹ ವರದಿಗಳು ವಾಸ್ತವಕ್ಕೆ ವಿರುದ್ಧವಾಗಿದೆ ಮತ್ತು ಜನರನ್ನು ದಾರಿ ತಪ್ಪಿಸುವಂತಿದೆ ಎಂದು ಹೇಳಿದೆ. 


ಅಕ್ಟೋಬರ್ 15ರಿಂದ ಅನ್ವಯ ಆಗುವಂತೆ ₹2 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ವಹಿವಾಟಿಗೆ ಶೇ 0.4ರಷ್ಟು ಎಂಡಿಆರ್‌ (ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌) ವಿಧಿಸುವುದನ್ನು ವಿರೋಧಿಸಿ ಅಕ್ಟೋಬರ್‌ 2ರಂದು ದೇಶವ್ಯಾಪಿ 'ಯುಪಿಐ ರಹಿತ' ದಿನವಾಗಿ ಘೋಷಿಸಲಾಗಿದೆ ಎನ್ನುವ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಂತಹ ಯಾವುದೇ ಕರೆ ನೀಡಿಲ್ಲ' ಎಂದು 'ಸಿಎಐಟಿ' ಸ್ಪಷ್ಟಪಡಿಸಿದೆ.

ಪ್ರಸ್ತುತ ವಿಧಿಸಲಾಗಿರುವ ಎಂಡಿಆರ್‌ ಗ್ರಾಹಕರಿಗೆ ಅನ್ವಯಿಸುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ವಹಿವಾಟುಗಳನ್ನೂ ಶುಲ್ಕದಿಂದ ಹೊರಗಿಡಲಾಗಿದೆ. ಆದರೆ, ₹75,000 ಮೊತ್ತದ ವಹಿವಾಟುಗಳಿಗೆ ಎಂಡಿಆರ್‌ ಮಿತಿಯನ್ನು ₹300ಕ್ಕೆ ನಿಗದಿ ಮಾಡಲಾಗಿದ್ದು, ಇದನ್ನು ವ್ಯಾಪಾರಿಗಳು ಭರಿಸಬೇಕಾಗಿದೆ.

ಎಂಡಿಆರ್‌ ಶುಲ್ಕ ತೆರಿಗೆಯಲ್ಲ: ನಿರ್ಮಲಾ

ನವದೆಹಲಿ (ಪಿಟಿಐ): 'ಆಯ್ದ ಯುಪಿಐ ವಹಿವಾಟಿನ ಮೇಲೆ ವಿಧಿಸಲು ಪ್ರಸ್ತಾಪಿಸಿರುವ ಎಂಡಿಆರ್‌ ಶುಲ್ಕವು (ಮರ್ಚೆಂಟ್ ಡಿಸ್ಕೌಂಟ್ ರೇಟ್‌) ತೆರಿಗೆ, ಸೆಸ್ ಅಥವಾ ಸರ್‌ಚಾರ್ಜ್‌ ಅಲ್ಲ' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಹೇಳಿದ್ದಾರೆ.

ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಎಂಡಿಆರ್ ಒಂದು ಶುಲ್ಕವಾಗಿದ್ದು, ಯುಪಿಐ ಸೇವೆ ಒದಗಿಸುವುದಕ್ಕಾಗಿ ಹಣಕಾಸು ಸೇವೆ ನೀಡುವ ಕಂಪನಿಗಳು ವಿಧಿಸುವ ಶುಲ್ಕವಾಗಿದೆ. ಈ ಶುಲ್ಕದಿಂದ ಸಂಗ್ರಹವಾಗುವ ಮೊತ್ತವು ಕೇಂದ್ರ ಸರ್ಕಾರಕ್ಕೆ ಬರುವುದಿಲ್ಲ. ಅಲ್ಲದೆ, ಎಂಡಿಆರ್ ಶುಲ್ಕವು ಗ್ರಾಹಕರ ಮೇಲೆ ವರ್ಗಾಯಿಸಲಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries