ಮೊಕಕಚಾಂಗ್: ಮದ್ಯ ನಿಷೇಧ ಕಾನೂನು ಜಾರಿಯಲ್ಲಿರುವ ನಾಗಾಲ್ಯಾಂಡ್‌ನ ಮೊಕಕಚಾಂಗ್‌ನಲ್ಲಿ ನಕಲಿ ಮದ್ಯ ಸೇವಿಸಿ 19 ಜನ ಮೃತಟ್ಟಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಮೊಕಕಚಾಂಗ್ ಜಿಲ್ಲೆಯಲ್ಲಿ 8 ಜನ ಹಾಗೂ ಟ್ಯೂನ್ ಸಯಾಂಗ್‌ನಲ್ಲಿ 11 ಜನ ಕಲಬೆರಕೆ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ.
ಕಲಬೆರಕೆ ಮದ್ಯದ ಸರಬರಾಜು ಬಗ್ಗೆ ಪತ್ತೆ ಹಚ್ಚಲು ಡಿವೈಎಸ್‌ಪಿ ಐ ಬಂಗ್ಲಾಂಗ್ ಚಾಂಗ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಎಸ್ಪಿ ಐ ಬಂಗ್ಲಾಂಗ್ ಚಾಂಗ್ ಮಾಹಿತಿ ನೀಡಿದ್ದಾರೆ.
ನಕಲಿ ಮದ್ಯ ಸೇವನೆ ಸಾವಿಗೆ ಕಾರಣವಾಗಿದೆಯೇ ಎಂದು ತಿಳಿಯಲು ಮಾದರಿಗಳನ್ನು ಗುವಾಹಟಿಯ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆ ಬಳಿಕ ನಕಲಿ ಮದ್ಯ ಜಾಲಗಳ ಮೇಲೆ ದಾಳಿ ನಡೆಸಿ 19 ಜನರನ್ನು ಬಂಧಿಸಲಾಗಿದೆ. ಸುಮಾರು 3 ಸಾವಿರಕ್ಕೂ ಅಧಿಕ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಲೇಬಲ್ ಇಲ್ಲದ, ನಕಲಿ ಮದ್ಯ ಸೇವಿಸದಂತೆ ಹಾಗೂ ಮದ್ಯ ಸೇವಿಸಿದ ನಂತರ ತಲೆತಿರುಗುವಿಕೆ, ದೃಷ್ಟಿ ಮಂದವಾದರೆ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

