ಲುಧಿಯಾನ: ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ರವನೀತ್ ಸಿಂಗ್ ಬಿಟ್ಟೂ ಅವರನ್ನು ಪಂಜಾಬ್ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಬೆಂಗಾವಲು ಪಡೆ ಫಿರೋಜ್‌ಪುರ ರಸ್ತೆಯಲ್ಲಿ ಹಾದು ಹೋಗುವಾಗ ಮದ್ಯದ ಬಾಟಲಿ, ಮೊಟ್ಟೆ ಮತ್ತು ಟೊಮೆಟೊಗಳನ್ನು ಎಸೆದಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
'ಬಾಟಲಿಯನ್ನು ನಾನು ಹಿಂತಿರುಗಿಸುತ್ತಿದ್ದೇನೆ. ಇತರ ಎಎಪಿ ನಾಯಕರು ಪಂಜಾಬ್ ಅನ್ನು ಲೂಟಿ ಮಾಡುವಾಗ ಮಾನ್ ಮದ್ಯ ಸೇವಿಸಿ ಆನಂದಿಸಲಿ' ಎಂದು ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಹೊರಗೆ ಮದ್ಯದ ಬಾಟಲಿ ಹಿಡಿದುಕೊಂಡು ರವನೀತ್ ಬಿಟ್ಟೂ ಅವರು ಕೂಗಿದ್ದಾರೆ.
ಶುಕ್ರವಾರ ಪಂಜಾಬ್‌ನ ಬಟಾಲಾ ಬಳಿ ಬಿಟ್ಟೂ ಅವರ ಬೆಂಗಾವಲು ಪಡೆಯ ಮೇಲೆ ಮೊಟ್ಟೆ ಮತ್ತು ಟೊಮೆಟೊಗಳನ್ನು ಎಸೆಯಲಾಗಿತ್ತು. ಅಲ್ಲಿ ಎಸೆಯಲಾದ ಮೊಟ್ಟೆ ಮತ್ತು ಟೊಮೆಟೊಗಳನ್ನು ತಾನು ಹಿಂದಿರುಗಿಸುತ್ತಿರುವುದಾಗಿ ಬಿಟ್ಟೂ ಹೇಳಿದ್ದಾರೆ.

