ಕಾಸರಗೋಡು: ವಿದೇಶದಲ್ಲಿ ಕೆಲಸ ನೀಡುವ ಭರವಸೆನೀಡಿ 4,84,200 ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಠಾನೆ ಪೆÇಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಧೂರು ಹಿದಾಯತ್ ನಗರದ ರಿಯಾದ್ ಮಂಜಿಲ್‍ನ ಅಬ್ದುಲ್ ರೌಫ್ (45) ಎಂಬುವರ ದೂರಿನನ್ವಯ, ಕೊಟ್ಟಂ ಸಿಟಿಯ ಚಾಲಕುಡಿ ನಿವಾಸಿಗಳಾದ ಶ್ಯಾಮ ಸುಕುಮಾರನ್ ನಾಯರ್ ಮತ್ತು ಗ್ರೇಸ್ ಬೋಬಿ ಎಂಬಿವರ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುಕೆಯಲ್ಲಿ ಬಾರ್ ಬೆಸ್ಟರ್ ಹೆಲ್ತ್ ಕೇರ್ ಲಿಮಿಟೆಡ್ ಎಂಬ ಸಂಸ್ಥೆಯಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಆರೋಪಿಗಳು 2025 ಸೆಪ್ಟೆಂಬರ್ 30ರಿಂದ 2026 ಜೂನ್ 10 ನಡುವಿನ ಅವಧಿಯಲ್ಲಿ ನನ್ನ ಬ್ಯಾಂಕ್ ಖಾತೆಯಿಂದ ಹಲವು ಬಾರಿಯಾಗಿ ಒಟ್ಟು 4,84,200 ರೂ. ಪಡೆದು ನಂತರ ಕೆಲಸ ಮಾಡಿಕೊಡದೆ, ಹಣವನ್ನೂ ವಾಪಾಸುಮಾಡದೆ ವಂಚಿಸಿರುವುದಾಗಿ ಅಬ್ದುಲ್ ರೌಫ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

